ಸುನ್ನಿ ಬಾಲ ಸಂಘ (SBS) ಕುಲಾಲು ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ

ಕುಲಾಲು: ಸುನ್ನಿ ಬಾಲ ಸಂಘ (SBS) ಕುಲಾಲು ಶಾಖೆಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಬದ್ರಿಯಾ ಕುಲಾಲು ಮಸೀದಿಯಲ್ಲಿ ನಡೆಯಿತು.
ಬದ್ರಿಯಾ ಜುಮಾ ಮಸೀದಿ ಖತೀಬರಾದ ಮಸ್ಊದ್ ಸಅದಿ ಉಸ್ತಾದರು ದುಆ ನೆರವೇರಿಸಿದರು. ಶಿಹಾಬುದ್ದೀನ್ ಸಅದಿ ಸಭೆಯನ್ನು ಉದ್ಘಾಟಿಸಿದರು. ಕುಲಾಲು SBS ಶಾಖೆಯ ಕಾರ್ಯದರ್ಶಿ ಶಕೀಲ್ ಸ್ವಾಗತಿಸಿದರು.
ಬಳಿಕ ಮಸ್ಊದ್ ಸಅದಿ, ಶಿಕ್ಷಣದ ಮಹತ್ವದ ಕುರಿತು ಪ್ರಾಸ್ತಾವಿಕ ಭಾಷಣಗೈದರು.
ಚುನಾವಣೆಯ ಮೂಲಕ ಕುಲಾಲು ಶಾಖೆಯ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶಕೀಲ್, ಪ್ರಧಾನಕಾರ್ಯದರ್ಶಿ ಜುನೈದ್, ಕೋಶಾಧಿಕಾರಿಯಾಗಿ ಅಲ್ಪಾಝ್ ಹಾಗೂ ಸದಸ್ಯರಾಗಿ ಅಪ್ನಾನ್,ಸಪ್ವಾನ್, ಇರ್ಫಾನ್, ಹಾಪಿಳ್, ಮುಬಶ್ಶಿರ್ ರನ್ನು ಆಯ್ಕೆಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಕುಲಾಲು ಇದರ ಅಧ್ಯಕ್ಷ ಇಬ್ರಾಹೀಂ ಕುಲಾಲ್,ಕಾರ್ಯದರ್ಶಿ ಇಲ್ಯಾಸ್ ಕಡಮಜಲು,ಖಜಾಂಜಿ ಸಾದು ಮೋನು ಪಿ.ಕೆ,ಉಪಾಧ್ಯಕ್ಷ ಕರೀಂ ಕುಲಾಲ್,ಜೊತೆ ಕಾರ್ಯದರ್ಶಿ ಅಬ್ದುಲ್ಲಾ ಕುಲಾಲು,ಸದಸ್ಯರಾದ ಅಶ್ರಪ್ ಮೇಲಂಗಡಿ,ಕುಂಞಿಮೋನು ಕಟ್ಟದಪಡ್ಪು ಭಾಗವಹಿಸಿದ್ದರು.
SBS ಕುಲಾಲು ಶಾಖೆಯ ನೂತನ ಪ್ರಧಾನ ಕಾರ್ಯ ದರ್ಶಿ ಜುನೈದ್ ವಂದಿಸಿದರು.