ಮಲ್ಪೆ | ಪಡುಕೆರೆಯಲ್ಲಿ ಮತ್ತೊಂದು ಕಾಂಗ್ರೆಸ್ ಫ್ಲೆಕ್ಸ್‌ಗೆ ಕಿಡಿಗೇಡಿಗಳಿಂದ ಹಾನಿ: ಪ್ರಕರಣ ದಾಖಲು

ಮಲ್ಪೆ, ಜೂ.7: ಮಲ್ಪೆಪಡುಕೆರೆ ಸೇತುವೆಯ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭಕೋರಿ ಹಾಕಲಾಗಿದ್ದ ಮತ್ತೊಂದು ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿ ಎಸಗಿರುವ ಬಗ್ಗೆ ವರದಿಯಾಗಿದೆ.
ಪಡುಕೆರೆ ಪರಿಸರದ ಕಾಂಗ್ರೆಸ್ ಕಾರ್ಯಕರ್ತರು ಮೇ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಶುಭಕೋರಿ ಫ್ಲೇಕ್ಸ್‌ನ್ನು ಅಳವಡಿಸಿದ್ದರು. ಜೂ.4ರಂದು ಯಾರೋ ಕಿಡಿಗೇಡಿಗಳು ಈ ಫ್ಲೆಕ್ಸ್‌ಗೆ ಹಾನಿ ಎಸಗಿರುವುದು ಕಂಡುಬಂದಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಸುದರ್ಶನ ಸುವರ್ಣ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story