Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಬಾಬಾಸಾಹೇಬರ ಸಾಂಗತ್ಯದಲ್ಲಿ ಸವಿತಾ...

ಬಾಬಾಸಾಹೇಬರ ಸಾಂಗತ್ಯದಲ್ಲಿ ಸವಿತಾ ಅಂಬೇಡ್ಕರ್

ಡಾ. ಶಿವರಾಜ್ ಬ್ಯಾಡರಹಳ್ಳಿಡಾ. ಶಿವರಾಜ್ ಬ್ಯಾಡರಹಳ್ಳಿ7 Jun 2023 12:04 PM IST
share
ಬಾಬಾಸಾಹೇಬರ ಸಾಂಗತ್ಯದಲ್ಲಿ ಸವಿತಾ ಅಂಬೇಡ್ಕರ್

ಭಾರತದ ರಾಜಕೀಯ ಚರಿತ್ರೆಗೆ ಭದ್ರಬುನಾದಿ ಹಾಕಿ ಅದಕ್ಕೊಂದು ಸುಭದ್ರವಾದ ಸಂವಿಧಾನವನ್ನು ಕೊಟ್ಟು ಇಡೀ ಸಮಾಜವನ್ನು ತಾಯಿಯಂತೆ ಪೊರೆದ ಬಿ.ಆರ್. ಅಂಬೇಡ್ಕರ್ ಅವರ ಬದುಕಿನ ಪಯಣದ ಕಥನ ತುಂಬಾ ಚಾರಿತ್ರಿಕವಾದುದು. ಇಂದು ವಿಶ್ವವೇ ಕೊಂಡಾಡುತ್ತಿರುವ ಬಾಬಾಸಾಹೇಬರನ್ನು ಎಲ್ಲರೂ ಅರಿಯುತ್ತಿದ್ದಾರೆ. ಅಂಬೇಡ್ಕರ್ ತಮ್ಮ ಜೀವಿತ ಅವಧಿಯಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಜನರ ಮನದಾಳದಲ್ಲಿ ಶಾಶ್ವತವಾಗಿ ಉಳಿದಿವೆ.

ಅಂಬೇಡ್ಕರ್ ಜೀವನದ ಏಳು ಬೀಳುಗಳು ಬಹುಕಾಲದಿಂದ ಚರ್ಚೆಯಾಗುತ್ತಲೇ ಇವೆ.ರಾಜಕೀಯವಾಗಿಯೂ ಹೆಚ್ಚು ಮಹತ್ವಪಡೆದುಕೊಂಡಿವೆ. ಆದರೂ ಆತ್ಮಕತೆಗಳ ರೂಪದಲ್ಲಿ ಚರ್ಚೆಯಾಗಿ ಅದಕ್ಕೊಂದು ವಿಶಿಷ್ಟ ರೂಪ ನೀಡಿದ ಕೃತಿಗಳು ಕಡಿಮೆಯೇ ಎಂದು ಹೇಳಬಹುದು. ಮರಾಠಿ ದಲಿತ ಆತ್ಮಕತೆಗಳಿಗೆ ವಿಶಿಷ್ಟ ಸ್ಥಾನವಿದೆ. ಸಾಕಷ್ಟು ಆತ್ಮಕತೆಗಳು ಬಂದಿರುವ ಭಾಷೆ ಎಂದರೆ ಅದು ಮರಾಠಿಯಲ್ಲಿ ಮಾತ್ರ. ಸಂಖ್ಯಾದೃಷ್ಟಿಯಲ್ಲಿಯೂ ಮತ್ತು ಶೈಲಿ ತಂತ್ರದಿಂದಲೂ ಅಲ್ಲಿಯ ಆತ್ಮಕತೆಗಳಿಗೆ ಸಾಂಸ್ಕೃತಿಕವಾಗಿ ಮಹತ್ವವಿದೆ. ನೈಜವಾಗಿ ಕಟ್ಟುವ ಮತ್ತು ಹಾಗೆಯೇ ಬದುಕಿದ ಮರಾಠಿ ದಲಿತ ಲೇಖಕರು ಬರೆದ ಆತ್ಮಕತೆಗಳನ್ನು ಕನ್ನಡದ ದಲಿತ ಆತ್ಮಕತೆಯೊಂದಿಗೆ ಸಮೀಕರಿಸಿ ಚರ್ಚೆಗಳು ಅಲ್ಲಲ್ಲಿ ನಡೆದಿವೆ.

ಬೌದ್ಧಿಕವಾಗಿ ಅಂಬೇಡ್ಕರ್ ಏರಿದ ಎತ್ತರ ಇಂದಿಗೂ ಪಾಶ್ಚಾತ್ಯ ದೇಶಗಳಲ್ಲಿ ಅವರನ್ನು ಸ್ಮರಣೆ ಮಾಡಿಕೊಳ್ಳುವ ಪರಿ ಅನನ್ಯವಾದುದು. ಹಾಗಾಗಿಯೇ ಅಂಬೇಡ್ಕರ್ ಭಾರತದಾಚೆಗೆ ತನ್ನ ಬೌದ್ಧಿಕ ಬೆಳಕಿನಿಂದ ಗುರುತಾಗಿ ಬೆಳೆದವರು. ಅತ್ಯಂತ ಎತ್ತರವಾದ ಸಾಧನೆ ಮಾಡಿದವರ ಖಾಸಗಿ ಬದುಕುಗಳ ಬಗೆಗೆ ಓದುಗರಲ್ಲಿ ಸಾಮಾನ್ಯವಾಗಿ ಕುತೂಹಲ ಇದ್ದೇ ಇರುತ್ತದೆ.

ದೇಶವನ್ನೇ ತನ್ನ ಬದುಕು ಎಂದು ತಿಳಿದು ದೇಹದ ಆಯಾಸವನ್ನು, ಅನಾರೋಗ್ಯವನ್ನು ಲೆಕ್ಕಿಸದೆ ದೇಶದ ಹಿತಚಿಂತನೆಗಾಗಿ ದುಡಿದ ಅಂಬೇಡ್ಕರ್ ಅವರ ಬದುಕಿನ ವೈಯಕ್ತಿಕ ವಿವರಗಳು ಬೇರೆಯವರು ಹೇಳುವುದಕ್ಕಿಂತ, ಬರೆಯುವುದಕ್ಕಿಂತ ಸಂಗಾತಿಯಾಗಿ ಡಾ. ಸವಿತಾ ಅಂಬೇಡ್ಕರ್ ಬರೆದಿರುವುದು ಹೆಚ್ಚು ಸ್ಪಷ್ಟತೆ ಮತ್ತು ನಿಖರವಾಗಿವೆ. ಬಾಬಾ ಸಾಹೇಬರಿಗೆ ಎರಡನೇ ಪತ್ನಿಯಾಗಿ ಬಂದ ವೈದ್ಯೆಯೂ, ಪುಸ್ತಕ ಪ್ರೇಮಿಯೂ ಆದ (ಡಾ.ಶಾರದಾ ಕಬೀರ್) ಡಾ.ಸವಿತಾ ಅಂಬೇಡ್ಕರ್ ಸಂಸಾರದ ಬಂಡಿಯ ಹೊಣೆಹೊತ್ತು ಸಾಗಿದ ಕತೆಯ ಕಥಾನಕವಿದು. ದೊಡ್ಡ ಸಾಧಕರ ಹೆಂಡತಿಯರು ಅನುಭವಿಸಿದ ತಾಕಲಾಟಗಳು, ಸಂಕಟಗಳು, ಹೇಳಲಾಗದ ವಿವರಗಳು, ಬರೆಯಲಾರದ ಸಂಗತಿಗಳು ಇದ್ದೇ ಇರುತ್ತವೆ. ಆತ್ಮಕತೆಗಳ ಜಾಡು ಸತ್ಯ, ಮಿಥ್ಯೆಗಳ ನಡುವೆ ನೆನಪಿನ ಪ್ರಭಾವಳಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ಕೆಲವು ಹೇಳಲಿಕ್ಕಾಗದ ಕಣ್ಣೀರ ಕಥನಗಳು ಸವಿತಾ ಅಂಬೇಡ್ಕರ್ ಬರೆದ ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ಯೂ ದಾಖಲಾಗಿವೆ. ಈ ಕೃತಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಅನಿಲ ಹೊಸಮನಿ

ಅಂಬೇಡ್ಕರ್ ಅವರನ್ನು ಕುರಿತು ವಿಶ್ವವಿದ್ಯಾನಿಲಯಗಳು ಭಿನ್ನ ಬಗೆಯಲ್ಲಿ ಚಿಂತಿಸುತ್ತಿವೆ. ಸಂಶೋಧನಾ ವಲಯವೂ ತನ್ನ ಹುಡುಕಾಟದಲ್ಲಿ ತೊಡಗುತ್ತಾ ಬಂದಿವೆ. ಭಾರತದ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಅಂಬೇಡ್ಕರ್ರವರ ಬಯಲ ಬದುಕಿಗಿಂತ ಅಂತರಂಗದ ಕಿಟಕಿಯಲ್ಲಿ ಕಾಣುವ ಭಾವನೆಯ ಬುತ್ತಿಯ ವಿವರಗಳು ಕಲಕುತ್ತವೆ. 
ಈ ಕೃತಿ ಸವಿತಾ ಅವರ ಆತ್ಮಕತೆಯಾದರೂ ಇದರ ತುಂಬಾ ಅಂಬೇಡ್ಕರ್ ಅವರೇ ತುಂಬಿದ್ದಾರೆ. ಅವರಿಂದ ಬಾಬಾಸಾಹೇಬರ ಆತ್ಮ ಚರಿತ್ರೆಯನ್ನು ಬಹು ಆಯಾಮದಲ್ಲಿ ನಿರ್ಭಿಡೆಯಿಂದ ಬರೆಸಿಕೊಂಡಿರುವ ಈ ಕೃತಿ ಹೊಚ್ಚ ಹೊಸದೆನಿಸುತ್ತದೆ. ಕೆಲವು ಸಾರ್ವಜನಿಕವಾಗಿ ಚರ್ಚೆ ಆಗಿದ್ದರೂ ಇನ್ನು ಕೆಲವು ವಿವರಗಳು ತೀರಾ ವೈಯಕ್ತಿಕವಾಗಿ ಘಾಸಿ ಉಂಟು ಮಾಡಿದ್ದ ವಿವರಗಳು ಮತ್ತು ಅದಕ್ಕೆ ವಿಶ್ಲೇಷಣೆ, ಸಮರ್ಥನೆ ಕೊಡುತ್ತಾ ತನ್ನ ಮೇಲಿದ್ದ ಆಪಾದನೆಯನ್ನು ಬಿಡಿಸಿಕೊಂಡು ನಿರಾಳವಾಗುವ ಹೆಣ್ಣೊಬ್ಬಳ ಅಂತರಂಗದ ತುಡಿತ ಸ್ಪಷ್ಟವಾಗುತ್ತದೆ.

ಕೃತಿ: ಡಾ. ಅಂಬೇಡ್ಕರ್ ಸಹವಾಸದಲ್ಲಿ
(ಆತ್ಮ ಕಥನ)
ಲೇಖಕರು:
ಡಾ. ಸವಿತಾ ಭೀಮರಾವ್ ಅಂಬೇಡ್ಕರ್
ಕನ್ನಡಕ್ಕೆ: ಅನಿಲ ಹೊಸಮನಿ
ಬೆಲೆ: 330 ರೂ.
ಪ್ರಕಾಶನ: ಲಡಾಯಿ ಪ್ರಕಾಶನ ಗದಗ
ಮೊ: 9480286844

share
ಡಾ. ಶಿವರಾಜ್ ಬ್ಯಾಡರಹಳ್ಳಿ
ಡಾ. ಶಿವರಾಜ್ ಬ್ಯಾಡರಹಳ್ಳಿ
Next Story
X