ಉಜ್ವಾಡ್ ಪತ್ರಿಕೆ ಸಂಪಾದಕರಾಗಿ ವಂ.ಆಲ್ವಿನ್ ಸಿಕ್ವೇರಾ ಅಧಿಕಾರ ಸ್ವೀಕಾರ

ಉಡುಪಿ, ಜೂ.7: ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಇದರ ನೂತನ ಸಂಪಾದಕರಾಗಿ ವಂ.ಆಲ್ವಿನ್ ಸಿಕ್ವೇರಾ ಅಧಿಕಾರ ವಹಿಸಿಕೊಂಡರು.
ಕಕ್ಕುಂಜೆ ಅಂಬಾಗಿಲು ಬಳಿಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮನ ಸಂಪಾದಕ ವಂ.ರೊಯ್ಸನ್ ಫೆರ್ನಾಂಡಿಸ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಉಜ್ವಾಡ್ ಪತ್ರಿಕೆಯು ದೀಪಾ ಟ್ರಸ್ಟ್ ಅಡಿಯಲ್ಲಿ ಪ್ರಕಟಗೊಳ್ಳುತ್ತಿದ್ದು, ಪ್ರಕಾಶಕರು ಹಾಗೂ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ನೂತನ ಸಂಪಾದಕರಿಗೆ ಸ್ವಾಗತಿಸಿ ಶುಭ ಹಾರೈಸಿದರು. ನಿರ್ಗಮನ ಸಂಪಾದಕ ವಂ.ರೊಯ್ಸನ್ ಫೆರ್ನಾಂಡಿಸ್ ಉನ್ನತ ವ್ಯಾಸಂಗಕ್ಕಾಗಿ ರೋಮ್‌ಗೆ ತೆರಳಲಿದ್ದಾರೆ.
ದೀಪಾ ಟ್ರಸ್ಟ್ ಕಾರ್ಯದರ್ಶಿ ವಂ.ಹೆನ್ರಿ ಮಸ್ಕರೇನ್ಹಸ್, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ವಂ.ಹೆರಾಲ್ಡ್ ಪಿರೇರಾ, ಕಾರ್ಮಲ್ ಆಶ್ರಮದ ವಂ. ಪ್ರವೀಣ್ ಪಿಂಟೊ ಉಪಸ್ಥಿತರಿದ್ದರು.
Next Story