ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ನಿವಾರಿಸಲು ಕ್ರಮ : ಡಿಸಿ ರವಿಕುಮಾರ್

ಮಂಗಳೂರು, ಜೂ.7: ದ.ಕ ಜಿಲ್ಲೆಯಲ್ಲಿ ಪ್ರತೀ ವರ್ಷ ಜೂನ್ ತಿಂಗಳಲ್ಲಿ ಮಳೆ ಬರಬೇಕಿತ್ತು . ಈ ಬಾರಿ ತಡವಾದ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಜಿಲ್ಲಾಡಳಿತವು ಶಾಲಾ, ಕಾಲೇಜು ಸೇರಿ ದಂತೆ ಎಲ್ಲ ಕಡೆ ನೀರು ಪೂರೈಸಲು ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ತುಂಬೆ ಡ್ಯಾಂನಲ್ಲಿ ನೀರು 1.86 ಮೀ. ಮಟ್ಟಕ್ಕೆ ನೀರು ಇಳಿದಿತ್ತು. ಇದರಿಂದ ಮಂಗಳೂರು ನಗರಕ್ಕೆ ನೀರಿನ ಪೂರೈಕೆಗೆ ಸಮಸ್ಯೆ ಇದೆ ಎಂದು ಪಾಲಿಕೆ ಕಮಿಷನರ್ ತಿಳಿಸಿದರು. ಹೀಗಾಗಿ ಎಎಂಆರ್ ಡ್ಯಾ ನಿಂದ ಈಗಾಗಲೇ ನೀರು ಬಿಡಲಾಗಿದ್ದು, ತುಂಬೆ ಡ್ಯಾಂನಲ್ಲಿ 4 ಮೀಟರ್ ನೀರು ತುಂಬಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕೆಲಸ ಇತ್ತು. ಹೀಗಾಗಿ ಎರಡು ದಿನಗಳ ಕಾಲ ನೀರಿನ ಸಮಸ್ಯೆ ಮಂಗಳೂರಿನಲ್ಲಿ ತೀವ್ರಗೊಂಡಿತ್ತು. ಪೈಪ್ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ನೀರಿನ ಪೂರೈಕೆ ಆಗಿಲ್ಲ ಹೀಗಾಗಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದರೆ ಅವರು ತಮ್ಮ ಖಾಸಗಿ ಬೋರ್ ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು ದ.ಕ ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ನೆರವು ನೀಡಲಿದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿಯೂ ನೀರಿನ ಸಮಸ್ಯೆಯಾಗದಂತೆ ನೋಡ್ತೇವೆ ಪಾಲಿಕೆ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕವೂ ನೀರಿನ ಪೂರೈಕೆ ಆಗ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಹವಾಮಾನ ವರದಿಯಂತೆ ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.ಮುಂದಿನ ಮೂರು ದಿನಗಳ ಕಾಲ ಮಳೆಯಾಗುತ್ತದೆ ಅಂತ ಸೂಚನೆ ಸಿಕ್ಕಿದೆ ಅನಾಹುತ ಆಗದಂತೆ ತಡೆಯಲು ಸರಕಾರ ನಿರ್ದೇಶನ ಕೊಟ್ಟಿದೆ .ಈ ನಿಟ್ಟಿನಲ್ಲಿ ನಾವು ಅಲರ್ಟ್ ಆಗಿದ್ದು, ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.