ಧಾರವಾಡ ಲೋಕಸಭೆ ಬಿಜೆಪಿ ಟಿಕೆಟ್; ಪ್ರಹ್ಲಾದ್ ಜೋಶಿ ಬದಲಾವಣೆಗೆ ಒತ್ತಾಯ

ಬೆಂಗಳೂರು: ಕರ್ನಾಟಕದಲ್ಲಿ 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳ ಕುರಿತು ಮಾಧ್ಯಮಗಳ ವರದಿ ಬೆನ್ನಲ್ಲೇ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಪ್ರಹ್ಲಾದ್ ಜೋಶಿ ಅವರ ಬದಲಿಗೆ ಹೊಸಬರಿಗೆ ನೀಡಬೇಕೆಂದು ಒತ್ತಾಯ ಕೇಳಿ ಬಂದಿದೆ.
ವೀರಶೈವ ಲಿಂಗಾಯತ (Veerashaiva Lingayath Official) ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. 'ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖದ ಅವಶ್ಯಕತೆ ಇದೆ' ಎಂದು ಅದರಲ್ಲಿ ಬರೆಯಲಾಗಿದೆ.
''ಪ್ರಹ್ಲಾದ್ ಜೋಶಿ ಅವರು 2004 ರಿಂದ 2023 ವರಗೆ ಧಾರವಾಡ ಕ್ಷೇತ್ರವನ್ನು ಆಳಿದ್ದಾರೆ , ಆದ್ದರಿಂದ ಬರುವಂತಹ 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಹೊಸಬರಿಗೆ ಅವಕಾಶ ಮಾಡಿಕೊಡಬೇಕು'' ಎಂದು ಒತ್ತಾಯಿಸಲಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖದ ಅವಶ್ಯಕತೆ ಇದೆ ಮಾನ್ಯ ಶ್ರೀ @JoshiPralhad ಅವರು 2004 ರಿಂದ 2023 ವರಗೆ ಧಾರವಾಡ ಕ್ಷೇತ್ರವನ್ನು ಆಳಿದ್ದಾರೆ , ಆದ್ದರಿಂದ ಬರುವಂತಹ 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಹೊಸಬರಿಗೆ ಅವಕಾಶ ಮಾಡಿಕೊಡಬೇಕು .@AmitShah @narendramodi @BJP4India @BJP4Karnataka #VL_Karnataka pic.twitter.com/kYkxSIS7H1
— Veerashaiva Lingayath Official (@VL_Karnataka) June 7, 2023