ವೋಟಿಗಾಗಿ ಆಶ್ವಾಸನೆ ಕೊಟ್ಟ ಕಾಂಗ್ರೆಸ್ ಗೆದ್ದಮೇಲೆ ನೂರಾರು ಷರತ್ತುಗಳನ್ನು ಹಾಕಿದೆ: ಆಪ್ ಟೀಕೆ

ಬೆಂಗಳೂರು: ವೋಟಿಗಾಗಿ ಆಶ್ವಾಸನೆ ಕೊಟ್ಟ ಕಾಂಗ್ರೆಸ್ ಈಗ ಗೆದ್ದಮೇಲೆ ನೂರಾರು ಷರತ್ತುಗಳು ಹಾಕಿದೆ. ಜನರ ಒಳಿತಿಗಾಗಿ ಕೆಲಸ ಮಾಡುವವರಾಗಿದ್ದರೆ ಈ ಥರ ನವರಂಗಿ ಆಟ ಆಡ್ತಿರಲಿಲ್ಲ ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ,ಜನ ವಿರೋಧಿ ಗ್ಯಾರಂಟಿಗಳನ್ನು ಕೊಡುವುದಕ್ಕಿಂತ ಸುಮ್ಮನೆ ಇರುವುದೇ ವಾಸಿ. ಅರವಿಂದ್ ಕೇಜ್ರಿವಾಲ್ ಮಾಡಿರುವ ಕೆಲಸಗಳನ್ನು ನೀವು ಕೇವಲ ವೋಟಿಗಾಗಿ ಕಾಪಿ ಮಾಡಬಹುದೇ ಹೊರತು ಜನರ ಜೀವನದಲ್ಲಿ ಬದಲಾವಣೆ ತರಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು.
200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ, ಇದೀಗ ಷರತ್ತುಗಳನ್ನು ವಿಧಿಸಿರುವ ಸರ್ಕಾರದ ನಡೆಯ ವಿರುದ್ಧ ಆಮ್ ಆದ್ಮಿ ಪಕ್ಷದ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ವೋಟಿಗಾಗಿ ಆಶ್ವಾಸನೆ ಕೊಟ್ಟು ಈಗ ಗೆದ್ದಮೇಲೆ ನೂರಾರು ಷರತ್ತುಗಳು ಹಾಕಿದೆ ಕಾಂಗ್ರೆಸ್! ಜನರ ಒಳಿತಿಗಾಗಿ ಕೆಲಸ ಮಾಡುವವರಾಗಿದ್ದರೆ ಈ ಥರ ನವರಂಗಿ ಆಟ ಆಡ್ತಿರಲಿಲ್ಲ!
— AAP Bengaluru (@AAPBangalore) June 8, 2023
Looks like @INCKarnataka failed to mention its Terms and Conditions while promising Gruha Jyothi scheme before the elections!@MohanDasari_ pic.twitter.com/H1vO7gvR33