ಮಂಗಳೂರು: ಎಐಎಂಡಿಸಿ ವತಿಯಿಂದ ಫ್ಯಾಮಿಲಿ ಪ್ರೀಮಿಯರ್ ಲೀಗ್

ಮಂಗಳೂರು: ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್-ಮಸ್ಜಿದ್ ಒನ್ ಮೂವ್‍ಮೆಂಟ್ ವತಿಯಿಂದ ಫ್ಯಾಮಿಲಿ ಪ್ರೀಮಿಯರ್ ಲೀಗ್(ಎಫ್‍ಪಿಎಲ್)-ಇಂಟರ್ ಫ್ಯಾಮಿಲಿ ಫೆಸ್ಟ್ ಇದೇ ಬರುವ ಸೆಪ್ಟೆಂಬರ್ 2023 ತಿಂಗಳಲ್ಲಿ ಮಂಗಳೂರಿನಲ್ಲಿ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿರುವ ಎಐಎಂಡಿಸಿ, ದ.ಕ. ಜಿಲ್ಲೆಯ ಎಲ್ಲಾ ಫ್ಯಾಮಿಲಿ ಟ್ರಸ್ಟ್‍ಗಳ ಸದಸ್ಯರನ್ನು ಒಂದೆಡೆ ಸೇರಿಸಿ ಅವರ ನಡುವೆ ಸಮನ್ವಯ, ಸೌಹಾರ್ದ, ಸ್ನೇಹ ಸಂಬಂಧ ಬಲವರ್ಧನೆ ಮತ್ತು ಸ್ಪರ್ಧೆ ನಡೆಸಿ ಅವರನ್ನು ಇನ್ನಷ್ಟು ಕ್ರಿಯಾತ್ಮಕಗೊಳಿಸುವುದು ಹಾಗೂ ಇನ್ನುಳಿದ ಕುಟುಂಬಗಳಿಗೆ ಫ್ಯಾಮಿಲಿ ಟ್ರಸ್ಟನ್ನು ರಚಿಸಲು ಪ್ರೇರೇಪಿಸುವುದು ಈ ಫ್ಯಾಮಿಲಿ ಪ್ರೀಮಿಯರ್ ಲೀಗ್-ಇಂಟರ್ ಫ್ಯಾಮಿಲಿ ಫೆಸ್ಟ್‍ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದೆ.
ಈ ಫೆಸ್ಟ್‍ನಲ್ಲಿ ಚರ್ಚಾಕೂಟ, ಕ್ವಿಝ್, ಪಿಕ್ & ಆಕ್ಟ್, ನಿಧಿ ಶೋಧನೆ, ಕಿರಾಅತ್, ಕ್ರಿಕೆಟ್, ಫುಟ್ ಬಾಲ್, ಹಗ್ಗ ಜಗ್ಗಾಟ, ಹ್ಯಾಂಡ್ ರೆಸ್ಲಿಂಗ್ ಮತ್ತು ಮಕ್ಕಳಿಗೆ ವಿವಿಧ ಆಟೋಟಗಳು ನಡೆಯಲಿವೆ. ಫೆಸ್ಟ್‍ನಲ್ಲಿ ಭಾಗವಹಿಸುವ ಕುಟುಂಬಗಳ ನಡುವೆ ವೈವಾಹಿಕ ಸಂಬಂಧ ಕಲ್ಪಿಸಲು ಅವಕಾಶವಿದ್ದು, ಅತ್ಯುತ್ತಮ ಕುಟುಂಬಕ್ಕೆ ಬೆಸ್ಟ್ ಫ್ಯಾಮಿಲಿ ಅವಾರ್ಡ್ ನೀಡಿ ಗೌರವಿಸಲಾಗುವುದು. ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಕಡೆಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಫ್ಯಾಮಿಲಿ ಟ್ರಸ್ಟ್‍ಗಳು ತಮ್ಮ ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ (9606622638) ಸಂಖ್ಯೆಯನ್ನು ಸಂಪರ್ಕಿಸುವಂತೆ ಆಲ್‍ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್ (ಎಐಎಂಡಿಸಿ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.