ಚಲಾವಣೆಯಲ್ಲಿರುವ 2,000 ರೂ. ನೋಟುಗಳಲ್ಲಿ ಶೇ. 50 ವಾಪಸ್ ಬಂದಿವೆ: ಆರ್‌ಬಿಐ

ಹೊಸದಿಲ್ಲಿ: ಚಲಾವಣೆಯಲ್ಲಿದ್ದ 2,000 ರೂ. ನೋಟುಗಳಲ್ಲಿ ಶೇ. 50ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ಇಂದು ತಿಳಿಸಿದೆ.
ವಾಪಸ್ ಬಂದಿರುವ ನೋಟುಗಳ ಮೌಲ್ಯ 1.82 ಲಕ್ಷ ಕೋಟಿ ರೂ. ಆಗಿದೆ.
ಶೇ.85ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ವಾಪಸ್ ಬಂದಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಮೇ 19 ರಂದು 2 ಸಾವಿರ ರೂ.ವನ್ನುಚಲಾವಣೆಯಿಂದ ಹಿಂಪಡೆಯುವ ಘೋಷಣೆಯನ್ನು ಮಾಡಲಾಗಿತ್ತು.
Next Story