ಪಡುಬಿದ್ರಿ: ಆಂಧ್ರ ಪ್ರದೇಶದಲ್ಲಿ ರಸ್ತೆ ಅಪಘಾತ; ಉಚ್ಚಿಲ ಮೂಲದ ವ್ಯಕ್ತಿ ಮೃತ್ಯು

ಪಡುಬಿದ್ರಿ: ಮೀನಿನ ಕಂಟೇನರ್ ಮತ್ತು ಸರಕು ಲಾರಿಯ ಮಧ್ಯೆ ನಡೆದ ಅಪಘಾತದಲ್ಲಿ ಉಚ್ಚಿಲ ಮೂಲದ ವ್ಯಕ್ತಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ಆಂಧ್ರಪ್ರದೇಶದ ವಿಜಯವಾಡ-ಗುಂಟೂರು ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬಳಿ ನಡೆದಿದೆ.
ಮೃತ ಮೀನಿನ ಲಾರಿಯ ಚಾಲಕ ಉಚ್ಚಿಲ ಬಡಾ ಗ್ರಾಮದ ಭಾಸ್ಕರ ನಗರದ ನಿವಾಸಿ ಬಶೀರ್ ಎಂದು ಗುರುತಿಸಲಾಗಿದೆ. ಸರಕು ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.
ಆಂಧ್ರಪ್ರದೇಶ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಶೀರ್‌ನ ಸಂಬಂಧಿಕರು ಉಚ್ಚಿಲ ಬಡಾ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.

Next Story