Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಿದ್ದರಾಮಯ್ಯ ಸರಕಾರದ ಹಲವು ಸಂಸ್ಥೆಗಳು...

ಸಿದ್ದರಾಮಯ್ಯ ಸರಕಾರದ ಹಲವು ಸಂಸ್ಥೆಗಳು ನಷ್ಟದಲ್ಲಿವೆ ಎಂದ ಬಿಜೆಪಿಗೆ ತಿರುಗು ಬಾಣ ಆಯ್ತು ಟ್ವೀಟ್!

ಇದೆಲ್ಲ ನಿಮ್ಮದೇ ಸರಕಾರದ ಸಾಧನೆ ಎಂದ ನೆಟ್ಟಿಗರು

8 Jun 2023 1:35 PM IST
share
ಸಿದ್ದರಾಮಯ್ಯ ಸರಕಾರದ ಹಲವು ಸಂಸ್ಥೆಗಳು ನಷ್ಟದಲ್ಲಿವೆ ಎಂದ ಬಿಜೆಪಿಗೆ ತಿರುಗು ಬಾಣ ಆಯ್ತು ಟ್ವೀಟ್!
ಇದೆಲ್ಲ ನಿಮ್ಮದೇ ಸರಕಾರದ ಸಾಧನೆ ಎಂದ ನೆಟ್ಟಿಗರು

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಹಲವು ಇಲಾಖೆ ಹಾಗೂ ನಿಗಮ ಮಂಡಳಿಗಳು ನಷ್ಟದಲ್ಲಿವೆ ಎಂಬ ವಿಪಕ್ಷ ಬಿಜೆಪಿಯ ಆರೋಪಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಆರೋಪಿಸಿದೆ. ಆದರೆ, ಇವೆಲ್ಲ ಸಿದ್ದರಾಮಯ್ಯ ಅವರ ಸರಕಾರ ಬಂದ ಹದಿನೈದು ದಿನದಲ್ಲಿ ಆಗಿ ಹೋಯಿತಾ? ಎಂದು ಬಿಜೆಪಿಯ ಟ್ವೀಟ್ ಗೆ ಹಲವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಕೆಲವರು ಬಿಜೆಪಿ ಆಡಳಿತದಲ್ಲಿ ಹಲವು ಇಲಾಖೆಗಳ ಸಂಸ್ಥೆಗಳು ನಷ್ಟದಲ್ಲಿತ್ತು ಎನ್ನಲಾದ ಪತ್ರಿಕಾ ವರದಿಗಳನ್ನು ಹಂಚಿಕೊಂಡಿದ್ದಾರೆ. 

ಬಿಜೆಪಿಯ ಆರೋಪಗಳೇನು? 

'ರಾಜ್ಯದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ಪತರುಗುಟ್ಟುತ್ತಿರುವ ಸಿದ್ದರಾಮಯ್ಯ ಸರ್ಕಾರ ಸಿಕ್ಕ ಸಿಕ್ಕ ಇಲಾಖೆಗೆ ‘ಕೈ’ ಹಾಕಿ ಆರ್ಥಿಕ ದಿವಾಳಿ ಎಬ್ಬಿಸುತ್ತಿದೆ. ಬಿಎಂಟಿಸಿ- ಆರ್ಥಿಕ ಇಂಧನವಿಲ್ಲ, ಜಲಮಂಡಳಿ- ಹಣಕಾಸಿನ ಹಾಹಾಕಾರ, ಕೆಎಸ್‌ಆರ್‌ಟಿಸಿ - ನಷ್ಟದ ಹೆದ್ದಾರಿಯಲ್ಲಿ, ವಿದ್ಯುತ್ ಸರಬರಾಜು ಕಂಪೆನಿಗಳು - ಮುಳುಗುವ ಹಾದಿಯಲ್ಲಿ , ಇನ್ನು ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದ್ದು, ‘ಅರ್ಥ’ವಿಲ್ಲದ #ATMSarkara ಸೃಷ್ಟಿಸಿರುವ ಅರಾಜಕತೆಗೆ ಬಲಿಯಾಗಲು ‘ಸಿದ್ದ’ವಾಗಿವೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ. 

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನ್ಸೂರ್ ಖಾನ್, ''ಬಿಜೆಪಿಯು ತನ್ನ ಆಡಳಿತಾವಧಿಯಲ್ಲಿನ ದುರಾಡಳಿತ ಹಾಗೂ ತಾನು ಯಾವ್ಯಾವ ಇಲಾಖೆಗಳನ್ನು ದಿವಾಳಿಯ ಅಂಚಿಗೆ ದೂಡಿದ್ದೆ ಎಂಬುದನ್ನು ಸವಿವರವಾಗಿ ಜಗಜ್ಜಾಹೀರುಗೊಳಿಸಿದೆ. ಬಿಜೆಪಿ ಸರ್ಕಾರ ಯಾವೆಲ್ಲ ಇಲಾಖೆಗಳಿಗೆ ಮುಳುಗು ನೀರು ತಂದಿತ್ತು ಎಂಬುದನ್ನು ರಾಜ್ಯದ ಜನತೆಗೆ ವಿವರಿಸಿದ್ದಕ್ಕೆ ಅಭಿನಂದನೆಗಳು!'' ಎಂದು ವ್ಯಂಗ್ಯವಾಡಿದ್ದಾರೆ. 

ಭೀಮನಗೌಡ ಪರಗೊಂಡ ಎಂಬವರು ಪ್ರತಿಕ್ರಿಯಿಸಿ, ''ಬಿಎಂಟಿಸಿ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿದೆ'' ಎನ್ನಲಾದ ಪತ್ರಿಕೆಯೊಂದರ ವರದಿಯನ್ನು ಹಂಚಿಕೊಂಡಿದ್ದು, '4 ವರ್ಷದ ಆಡಳಿತ ಮಾಡಿದ್ದು ಬಿಜೆಪಿ. ಯಾವ ಉಚಿತ ಕೊಡದಿದ್ದರೂ ಹಿಂಗ್ ಯಾಕೆ ಆಯ್ತು? ಕಾರಣ ಏನು? ಹೊಣೆ ಯಾರು?' ಎಂದು ಪ್ರಶ್ನೆ ಮಾಡಿದ್ದಾರೆ. 

''ಬಿಜೆಪಿಯವರೇ, ಕಳೆದ ನಾಲ್ಕು ವರ್ಷಗಳ ನಿಮ್ಮ ಸಾಧನೆಯನ್ನು ನೀವೇ ಖುದ್ದಾಗಿ ವರ್ಣಿಸ್ತಾ ಇದ್ದೀರಿ. ಸೂಪರ್ ನೀವು'' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

''ನಿಮ್ಮ ಬಿಜೆಪಿ ಸರಕಾರದ ಅವಧಿಯ ಸಾಧನೆ, ನೀವೇ ವಿಮರ್ಶೆ ಮಾಡಿ ನಗೆಪಾಟಲಿಗೆ ಒಳಗಾಗಿದ್ದಿರಿ'' ಎಂದು ಗೋವಿಂದಪ್ಪ ಎಂಬವರು ಟೀಕಿಸಿದ್ದಾರೆ. 

.@BJP4Karnataka ತನ್ನ ಆಡಳಿತಾವಧಿಯಲ್ಲಿನ ದುರಾಡಳಿತ ಹಾಗೂ ತಾನು ಯಾವ್ಯಾವ ಇಲಾಖೆಗಳನ್ನು ದಿವಾಳಿಯ ಅಂಚಿಗೆ ದೂಡಿದ್ದೆ ಎಂಬುದನ್ನು ಸವಿವರವಾಗಿ ಜಗಜ್ಜಾಹೀರುಗೊಳಿಸಿದೆ. ಬಿಜೆಪಿ ಸರ್ಕಾರ ಯಾವೆಲ್ಲ ಇಲಾಖೆಗಳಿಗೆ ಮುಳುಗು ನೀರು ತಂದಿತ್ತು ಎಂಬುದನ್ನು ರಾಜ್ಯದ ಜನತೆಗೆ ವಿವರಿಸಿದ್ದಕ್ಕೆ ಅಭಿನಂದನೆಗಳು!https://t.co/lvZesU9eki

— Mansoor Khan (@MansoorKhanINC) June 8, 2023

4 ವರ್ಷದ ಆಡಳಿತ ಮಾಡಿದ್ದು @BJP4Karnataka. ಯಾವ ಉಚಿತ ಕೊಡದಿದ್ದರೂ ಹಿಂಗ್ ಯಾಕೆ ಆಯ್ತು? ಕಾರಣ ಏನು? ಹೊಣೆ ಯಾರು? pic.twitter.com/O3qM9bshtC

— ಭೀಮನಗೌಡ ಪರಗೊಂಡ (BHIMANAGOUDA PARAGONDA ) (@Bhimana11643135) June 7, 2023

ಇವೆಲ್ಲ ಹದಿನೈದು ದಿನದಲ್ಲಿ ಆಗಿ ಹೋಯಿತಾ? ಮಣ್ಣು ತಿಂತಾ ಇದ್ರಾ ಇಷ್ಟು ವರ್ಷ?

— Akash R Patil (@ImAkashPatil) June 7, 2023

ವಾಹ್ @BJP4Karnataka ವಾಹ್, ಕಳೆದ ನಾಲ್ಕು ವರ್ಷಗಳ ನಿಮ್ಮ ಸಾಧನೆಯನ್ನು ನೀವೇ ಖುದ್ದಾಗಿ ವರ್ಣಿಸ್ತಾ ಇದ್ದೀರಿ. ಸೂಪರ್ ನೀವು.

— ಧರ್ಮೇಂದ್ರ ಪ್ರಭು (@dpdharmendra1) June 7, 2023

ನಿಮ್ಮ ಬಿಜೆಪಿ ಸರಕಾರದ ಅವಧಿಯ ಸಾಧನೆ, ನೀವೇ
ವಿಮರ್ಶೆ ಮಾಡಿ ನಗೆಬಾಟಲಿಗೆ
ಒಳಗಾಗಿದ್ದಿರಿ.

— Govindappa C (@CGOVINDAPPA3) June 7, 2023
share
Next Story
X