ರೈಲು ದುರಂತಕ್ಕಿಂತ ಕೆಲವೇ ಕ್ಷಣಗಳ ಮೊದಲು ತೆಗೆದ ವೀಡಿಯೋ ವೈರಲ್ !
ಹೊಸದಿಲ್ಲಿ: ಒಡಿಶಾದ ಬಾಲಾಸೋರ್‌ನಲ್ಲಿ ಕಳೆದ ವಾರ ಭೀಕರ ರೈಲು ದುರಂತ ಸಂಭವಿಸಿದ ಕ್ಷಣದ ಒಂದು ವೀಡಿಯೋವನ್ನು ಒಡಿಶಾ ಟಿವಿ ಶೇರ್ ಮಾಡಿದ್ದು ಈ ವೀಡಿಯೋ ಸಾಕಷ್ಟು ಸುದ್ದಿಯಾಗಿದೆ.
ಕೊರಮಂಡಲ್ ಎಕ್ಸ್‌ಪ್ರೆಸ್ ರೈಲ ಇನ್ನೊಂದು ರೈಲಿಗೆ ಢಿಕ್ಕಿ ಹೊಡೆಯುವ ಕ್ಷಣದ ಈ ವೀಡಿಯೋದಲ್ಲಿ ನೈರ್ಮಲ್ಯ ಕಾರ್ಮಿಕರೊಬ್ಬರು ನೆಲ ಒರಸುತ್ತಿರುವುದು ಹಾಗೂ ಇತರ ಪ್ರಯಾಣಿಕರು ಆರಾಮವಾಗಿ ಕುಳಿತುಕೊಂಡಿರುವುದು ಕಾಣಿಸುತ್ತದೆ.
ಅರೆ ಕ್ಷಣದಲ್ಲಿ ಎಲ್ಲವೂ ಬುಡಮೇಲಾದಂತೆ ಕಾಣಿಸುತ್ತದೆ ಹಾಗೂ ಕ್ಯಾಮೆರಾ ಕೂಡ ಅಲುಗಾಡಲು ಆರಂಭಿಸುತ್ತದೆ ಹಾಗೂ ಎಲ್ಲರೂ ಚೀರಾಡುತ್ತಿರುವುದು ಕೇಳಿಸುತ್ತದೆ ಹಾಗೂ ವೀಡಿಯೋ ಅರ್ಧಕ್ಕೆ ಸ್ಥಗಿತಗೊಳ್ಳುತ್ತದೆ.
ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ವೀಡಿಯೋ ಚಿತ್ರೀಕರಿಸಿದ್ದರೆಂದು ಹೇಳಲಾಗುತ್ತಿದೆಯಾದರೂ ಇದು ಅಪಘಾತಗೊಂಡ ರೈಲಿನ ವೀಡಿಯೋ ಹೌದೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಈ ಅಪಘಾತದಲ್ಲಿ ಕನಿಷ್ಠ 288 ಜನರು ಸಾವಿಗೀಡಾಗಿ 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
Next Story