ಜೂ.10ಕ್ಕೆ ʼಧರ್ಮಯುದ್ಧ’ ಆಂಗ್ಲ ಭಾಷಾಂತರ ಕೃತಿ ಬಿಡುಗಡೆ

ಉಡುಪಿ, ಜೂ.8: ಸಾಂಸ್ಕೃತಿಕ ಸಂಘಟನೆ ಉಡುಪಿಯ ರಥಬೀದಿ ಗೆಳೆಯರು ಆಶ್ರಯದಲ್ಲಿ ಕನ್ನಡದ ಹಿರಿಯ ಸಾಹಿತಿ, ಕಾದಂಬರಿಕಾರ ಡಾ. ನಾ. ಮೊಗಸಾಲೆ ಅವರ ’ಧರ್ಮಯುದ್ದ’ ಕನ್ನಡ ಕಾದಂಬರಿಯ ಆಂಗ್ಲ ಭಾಷಾಂತರ ಕೃತಿಯ ಬಿಡುಗಡೆ ಸಮಾರಂಭ ಜೂ.10ರ ಶನಿವಾರ ಸಂಜೆ ಗಂಟೆ 4:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಗೃಹದಲ್ಲಿ ಜರಗಲಿದೆ.
ಹಿರಿಯ ಲೇಖಕರೂ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪರೂ ಆದ ಡಾ. ಬಿ. ಭಾಸ್ಕರ ರಾವ್ ಅವರು ಪುಸ್ತಕವನ್ನು ಬಿಡುಗಡೆಗೊಳಿಸುವರು. ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಹಿರಿಯ ವಿಮರ್ಶಕ ಡಾ.ಬಿ.ಜನಾರ್ದನ ಭಟ್ ಅವರು ಕೃತಿ ಅವಲೋಕನ ಮಾಡಲಿದ್ದು, ಮೂಲ ಕಾದಂಬರಿಕಾರ ಡಾ.ನಾ.ಮೊಗಸಾಲೆ ಮತ್ತು ಭಾಷಾಂತರಕಾರರಾದ ಡಾ.ಎನ್.ತಿರುಮಲೇಶ್ವರ ಭಟ್ ಉಪಸ್ಥಿತರಿರುವರು ಎಂದು ರಥಬೀದಿ ಗೆಳೆಯರು ಸಂಸ್ಥೆ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Next Story