ಮಂಗಳೂರಿನಲ್ಲಿ ತಂಪೆರೆದ ಮಳೆ

ಮಂಗಳೂರು, ಜೂ.8: ಕೇರಳದಲ್ಲಿ ಇಂದು ಮುಂಗಾರು ಪ್ರವೇಶಿಸಿದೆ. ಅದರ ಪರಿಣಾಮ ನಗರದಲ್ಲಿ ಇಂದು ಮುಸ್ಸಂಜೆ ಬಿರುಸಿನ ಮಳೆಯಾಗಿದೆ.
ಸಂಜೆಯವರೆಗೂ ಸುಡು ಬಿಸಿಲಿನಿಂದ ಕೂಡಿದ ನಗರದಲ್ಲಿ ಸಂಜೆಯಾಗುತ್ತಲೇ ಸುರಿದ ಮಳೆಯು ತಂಪಿನ ವಾತಾವರಣ ಕಾಣಿಸಿದೆ.
ನಗರದ ಹಂಪನಕಟ್ಟ, ಕಂಕನಾಡಿ, ವೆಲೆನ್ಸಿಯಾ, ಪಂಪ್‌ವೆಲ್, ಲಾಲ್‌ಬಾಗ್ ಮತ್ತಿತರ ಕಡೆ ಬಿರುಸಿನ ಮಳೆಯಾಗಿದೆ. ನಗರ ಹೊರವಲಯದಲ್ಲೂ ಮಳೆಯಾಗಿದೆ. ಆದರೆ ಗ್ರಾಮಾಂತರ ಪ್ರದೇಶದ ಬಹುತೇಕ ಕಡೆಗಳಲ್ಲಿ ಮಳೆ ಸುರಿದಿಲ್ಲ ಎಂದು ತಿಳಿದುಬಂದಿದೆ.
Next Story