ಮಟ್ಕಾ ದಂಧೆ: ಆರೋಪಿಗಳ ಸೆರೆ

ಮಂಗಳೂರು, ಜೂ.8: ನಗರದ ಹಂಪನಕಟ್ಟೆ ಸಮೀಪ ಪ್ರತ್ಯೇಕ ಮಟ್ಕಾ ಜೂಜಾಟ ಪ್ರಕರಣವನ್ನು ಬಂದರು ಪೊಲೀಸರು ಪತ್ತೆ ಹಚ್ಚಿ ಕೇಸು ದಾಖಲಿಸಿದ್ದಾರೆ.
ಬುಧವಾರ ಅಪರಾಹ್ನ 3ಕ್ಕೆ ಬಂದರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮದನ್ ಸಿ.ಎಂ. ಕಾರ್ಯಾಚರಣೆ ನಡೆಸಿ ಹಂಪನಕಟ್ಟೆ ಮಿಲ್ಕ್ ಪಾರ್ಲರ್ ಬಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ಸಜಿತ್ ಎಂಬಾತನನ್ನು ಬಂಧಿಸಿದ್ದಾರೆ.
ಹಂಪನಕಟ್ಟೆ ಹಳೆಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟ ಮಾಡುತ್ತಿದ್ದ ಮಂಜೇಶ್ವರದ ಚೇತನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
Next Story