ಫ್ರೆಂಚ್ ಓಪನ್: ರೂನ್‌ಗೆ ಸೋಲುಣಿಸಿ ಸೆಮಿ ಫೆನಲ್ ತಲುಪಿದ ಕಾಸ್ಪರ್ ರೂಡ್

ಪ್ಯಾರಿಸ್: ಹೊಲ್ಗರ್ ರೂನ್ ಅವರನ್ನು ಸೋಲಿಸಿದ ನಾಲ್ಕನೇ ಶ್ರೇಯಾಂಕದ ಕಾಸ್ಪರ್ ರೂಡ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆಯ ರೂಡ್ ಡೆನ್ಮಾರ್ಕ್ ಆಟಗಾರ ರೂನ್‌ರನ್ನು 6-1, 6-2, 3-6, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
ಕಳೆದ ವರ್ಷ ಈ ಇಬ್ಬರು ಆಟಗಾರರು ಕ್ವಾರ್ಟರ್ ಫೈನಲ್‌ನಲ್ಲಿಯೇ ಮುಖಾಮುಖಿಯಾಗಿದ್ದರು. ಆಗ ರೂಡ್ 4 ಸೆಟ್‌ಗಳ ಅಂತರದಿಂದ ಜಯಶಾಲಿಯಾಗಿದ್ದರು. ಆದರೆ ರೂಡ್ ಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ವಿರುದ್ಧ ಸೋತಿದ್ದರು.
20ರ ಹರೆಯದ ರೂನ್ ಕಳೆದ ತಿಂಗಳು ನಡೆದಿದ್ದ ಇಟಾಲಿಯನ್ ಓಪನ್‌ನಲ್ಲಿ ರೂಡ್‌ರನ್ನು ಸೋಲಿಸಿದ್ದರು. ಆದರೆ ಅಂತಿಮ-8ರ ಪಂದ್ಯದಲ್ಲಿ ರೂನ್ ಮೊದಲೆರಡು ಸೆಟ್‌ಗಳಲ್ಲಿ 26 ಅನಗತ್ಯ ತಪ್ಪೆಸಗಿದರು. ರೂಡ್ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಸವಾಲನ್ನ್ನು ಎದುರಿಸಲಿದ್ದಾರೆ.
Next Story