ಫುಟ್ಬಾಲ್: ಇಂಟರ್ ಮಿಯಾಮಿಗೆ ಮೆಸ್ಸಿ ಸೇರ್ಪಡೆ ಖಚಿತ

ಪ್ಯಾರಿಸ್: ಪ್ರಮುಖ ಲೀಗ್ ಫುಟ್ಬಾಲ್ ತಂಡ ಇಂಟರ್ ಮಿಯಾಮಿಯನ್ನು ಸೇರ್ಪಡೆಯಾಗುವುದಾಗಿ ಲಿಯೊನೆಲ್ ಮೆಸ್ಸಿ ಖಚಿತಪಡಿಸಿದರು.
ಅರ್ಜೆಂಟೀನದ 35ರ ಹರೆಯದ ಮೆಸ್ಸಿ ಬಾರ್ಸಿಲೋನದೊಂದಿಗೆ ಮರು ಸೇರ್ಪಡೆ ಇಲ್ಲವೇ ಸೌದಿ ಅರೇಬಿಯಾದೊಂದಿಗೆ ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುವ ಬದಲಿಗೆ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ. 2021ರಲ್ಲಿ ತನ್ನ ವೃತ್ತಿಜೀವನದ ಹೆಚ್ಚಿನ ಅವಧಿ ಕಳೆದಿರುವ ಬಾರ್ಸಿಲೋನವನ್ನು ತೊರೆದಿದ್ದ ಮೆಸ್ಸಿ ಕಳೆದ ಎರಡು ವರ್ಷಗಳನ್ನು ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್‌ನಲ್ಲಿ ಕಳೆದಿದ್ದರು. ಶನಿವಾರ ಪಿಎಸ್‌ಜಿ ಪರ ಕೊನೆಯ ಪಂದ್ಯ ಆಡಿದ್ದರು.
ಇಂಗ್ಲೆಂಡ್‌ನ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಸಹ ಮಾಲಿಕತ್ವದ ಇಂಟರ್ ಮಿಯಾಮಿ ತಂಡವನ್ನು 2018ರಲ್ಲಿ ಸ್ಥಾಪಿಸಲಾಗಿದೆ.
Next Story