ಮಂಗಳೂರು: ಕರಾವಳಿ ಯಲ್ಲಿ ಮಳೆ
ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರಿಗೆ ತಂಪೆರೆದ ವರುಣ

ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರಿಗೆ ತಂಪೆರೆದ ವರುಣ
ಮಂಗಳೂರು, ಜೂ.9; ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸಿದ ಕಾರಣ ದಕ್ಷಿಣ ಕನ್ನಡದಲ್ಲಿ ಶುಕ್ರವಾರ ಬೆಳಗ್ಗೆ 9.25ರಿಂದ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಗುಡುಗು ಸಹಿತ ಮಳೆ ಆರಂಭವಾಗಿದೆ.
ಗುರುವಾರ ಮುಂಗಾರು ಕೇರಳ ಪ್ರವೇಶಿಸಿ ರುವ ಹಿನ್ನಲೆಯಲ್ಲಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಶನಿವಾರ ದಿಂದ ರಾಜ್ಯಾದ್ಯಂತ ವ್ಯಾಪಕವಾಗಿ ಮಳೆ ಯಾಗುವ ಮುನ್ಸೂಚನೆ ನೀಡಿದೆ.ಈ ಬಾರಿ ಮುಂಗಾರು ಮಳೆ ಒಂದು ವಾರ ತಡವಾಗಿ ಕರಾವಳಿ ಪ್ರವೇಶಿಸಿದರೂ ವಾಡಿಕೆಯಂತೆ ಮಳೆಗೆ ಕೊರತೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ನಗರ ಸೇರಿ ಕರಾವಳಿಯ ಗ್ರಾಮಾಂತರ ಭಾಗದಲ್ಲಿ ಮಳೆಯಾಗಿದ್ದು, ಬಂಟ್ಬಾಳ, ಉಳ್ಳಾಲ, ಬೆಳ್ತಂಗಡಿ ಭಾಗದ ಹಲವಡೆ ಭಾರೀ ಮಳೆಯಾಗಿದೆ.
Next Story