ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದ ಬಾಲಿವುಡ್ ನಟಿ ಕಾಜೋಲ್
ಹೊಸದಿಲ್ಲಿ: ಬಾಲಿವುಡ್ ನಟಿ ಕಾಜೋಲ್ ಅವರು ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಶುಕ್ರವಾರ ಮಧ್ಯಾಹ್ನ ಘೋಷಿಸಿದ್ದಾರೆ.
ಖ್ಯಾತ ನಟಿ ತನ್ನ ಅಸ್ತಿತ್ವದಲ್ಲಿರುವ ಎಲ್ಲಾ ಪೋಸ್ಟ್‌ಗಳನ್ನು Instagram ನಿಂದ ಅಳಿಸಿದ್ದಾರೆ, ಆದರೆ ಅವರ ಟ್ವಿಟರ್ ಪ್ರೊಫೈಲ್ ನಲ್ಲಿ ಇನ್ನೂ ಹಿಂದಿನ ಪೋಸ್ಟ್‌ಗಳಿವೆ.
ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದ ಕಾಜೋಲ್ ತನ್ನ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ "ನನ್ನ ಜೀವನದ ಕಠಿಣ ಪರೀಕ್ಷೆಯೊಂದನ್ನು ಎದುರಿಸುತ್ತಿದ್ದೇನೆ... ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ" ಎಂದು ಬರೆದಿದ್ದಾರೆ.
ನಟಿ ತನ್ನ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕಲು ಕಾರಣವನ್ನು ಬಹಿರಂಗಪಡಿಸದಿದ್ದರೂ, "ನಿಮಗೆ ತುಂಬಾ ಪ್ರೀತಿಯನ್ನು ಕಳುಹಿಸಲಾಗುತ್ತಿದೆ" ಹಾಗೂ "ದಯವಿಟ್ಟು ಕಾಳಜಿ ವಹಿಸಿ" ಎಂಬಂತಹ ಕಾಮೆಂಟ್ ಗಳಿರುವ ಪೋಸ್ಟ್ ಗಳು ಹರಿದುಬರುತ್ತಿವೆ.
"ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇವೆ, ನಿಮ್ಮ ಸಮಯವನ್ನು ತೆಗೆದುಕೊಳ್ಳಿ.ಎಂದು ಓರ್ವ ಟ್ವಿಟರ್ ಬಳಕೆದಾರರು ಬರೆದರೆ, "ನನ್ನ ಪ್ರೀತಿಯನ್ನು ನಿಮಗೆ ಕಳುಹಿಸುತ್ತಿದ್ದೇನೆ. ನಿಮ್ಮ ಸಮಯವನ್ನು ತೆಗೆದುಕೊಳ್ಳಿ. ನಾವು ಇಲ್ಲೇ ಇರುತ್ತೇವೆ ಇನ್ನೊಬ್ಬರು ಬರೆದಿದ್ದಾರೆ.
ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಕಾಜೋಲ್ ಕೊನೆಯದಾಗಿ ಸಲಾಮ್ ವೆಂಕಿಯಲ್ಲಿ ಕಾಣಿಸಿಕೊಂಡರು, ವಿಶಾಲ್ ಜೇತ್ವಾ ಮತ್ತು ಅಮೀರ್ ಖಾನ್ (ಅತಿಥಿ ಪಾತ್ರದಲ್ಲಿ) ಸಹ ನಟರಾಗಿದ್ದರು.. ಈ ಚಿತ್ರವನ್ನು ರೇವತಿ ನಿರ್ದೇಶಿಸಿದ್ದು ಕಳೆದ ವರ್ಷ ತೆರೆಕಂಡಿತ್ತು. ನಟಿ ಮುಂದೆ ನೆಟ್‌ಫ್ಲಿಕ್ಸ್‌ನ ಚಿತ್ರ ಲಸ್ಟ್ ಸ್ಟೋರೀಸ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಜೋಲ್ ಸೂಪರ್ ಹಿಟ್ ಹಾಗೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕಭಿ ಖುಷಿ ಕಭಿ ಘಮ್..., ಬಾಜಿಗರ್, ಗುಪ್ತ್, ದುಷ್ಮನ್, ಕುಚ್ ಕುಚ್ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್ ಚಿತ್ರದಲ್ಲಿ ನಟಿಸಿದ್ದಾರೆ, ಪತಿ ಅಜಯ್ ದೇವಗನ್ ಹಾಗೂ ನಟ ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ನಟಿಸಿದ್ದಾರೆ.