ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳಿಗೆ ಬಲವಾದ ಪುರಾವೆ ನೀಡಿದ ಅಂತರಾಷ್ಟ್ರೀಯ ರೆಫ್ರೀ

ಹೊಸದಿಲ್ಲಿ: ಭಾರತದ ಕುಸ್ತಿಪಟು ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುವೊಬ್ಬರು ದೂರಿನಲ್ಲಿ ಉಲ್ಲೇಖಿಸಿರುವ ಲೈಂಗಿಕ ಕಿರುಕುಳದ ಘಟನೆಯನ್ನು ಅಂತಾರಾಷ್ಟ್ರೀಯ ಕುಸ್ತಿ ಕೋಚ್ ಒಬ್ಬರು ಪುಷ್ಠೀಕರಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಒಟ್ಟು ಏಳು ಮಂದಿ ಕುಸ್ತಿಪಟುಗಳು ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರ ಅವರಲ್ಲೊಬ್ಬಾಕೆ ನೀಡಿದ ದೂರಿನ ಪ್ರಕಾರ ಮಾರ್ಚ್ 2022ರಲ್ಲಿ ಲಕ್ನೋದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ ಟ್ರಯಲ್ಸ್ ಅಂತ್ಯದ ನಂತರ ಫೋಟೋಗೆ ಕುಸ್ತಿ ತಂಡ ಪೋಸ್ ನೀಡುವಾಗ ಸಿಂಗ್ ತನ್ನ ಪೃಷ್ಠದ ಮೇಲೆ ಕೈಯ್ಯಿರಿಸಿದ್ದರು. ಆಗ ತಾನು ದೂರ ಸರಿಯಲು ಯತ್ನಿಸಿದ್ದಾಗಿ ಆಕೆ ದೂರಿದ್ದರು.
ಈ ಘಟನೆಯ ಬಗ್ಗೆ ತಿಳಿದಿರುವುದಾಗಿ 2007ರಿಂದ ಅಂತಾರಾಷ್ಟ್ರೀಯ ಕುಸ್ತಿ ರೆಫ್ರೀ ಆಗಿ ಕಾರ್ಯನಿರ್ವಹಿಸುತ್ತಿರುವ ಜಗ್ಬೀರ್ ಸಿಂಗ್ ಹೇಳಿದ್ದಾರೆ. ಬ್ರಿಜ್ ಭೂಷಣ್ಗಿಂತ ತಾನು ಕೆಲವು ಅಡಿಗಳನ್ನು ದೂರದಲ್ಲಿ ನಿಂತಿದ್ದಾಗಿ ಹಾಗೂ ನಡೆದ ವಿದ್ಯಮಾನದಿಂದ ಯುವತಿಗೆ ಇರಿಸುಮುರಿಸು ಉಂಟಾಗಿರುವುದು ಕಂಡುಬಂದಿತ್ತು ಎಂದು ಜಗ್ಬೀರ್ ಹೇಳಿದ್ದಾರೆ.
"ಆತ ಕೃತ್ಯವೆಸಗಿದ್ದನ್ನು ನೋಡಿಲ್ಲ ಆದರೆ ʼಇಲ್ಲಿ ಬಾ, ಇಲ್ಲಿ ನಿಲ್ಲುʼ ಹೇಳುವ ಮೂಲಕ ಆತನ ಕೈಕಾಲುಗಳು ಸದಾ ಸಕ್ರಿಯವಾಗಿತ್ತು," ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದ 125 ಸಂಭಾವ್ಯ ಸಾಕ್ಷಿಗಳಲ್ಲಿ ಜಗ್ಬೀರ್ ಕೂಡ ಒಬ್ಬರಾಗಿದ್ದಾರೆ.
ಘಟನೆ ನಡೆದಾಗ ಕೊನೆಯ ಸಾಲಿನಲ್ಲಿ ನಿಂತಿದ್ದ ಮಹಿಳಾ ಕಸ್ತಿಪಟು ಪಕ್ಕ ಸಿಂಗ್ ನಿಂತಿದ್ದರು., ಆದರೆ ಕುಸ್ತಿಪಟುವಿನ ಆಘಾತಕ್ಕೆ ಆಕೆಗೆ ಆತನ ಕೈ ತನ್ನ ಹಿಂದೆ ಇರುವುದು ಗಮನಕ್ಕೆ ಬಂದಿತ್ತು. ದೂರ ಸರಿಯಲು ಯತ್ನಿಸಿದಾಗ ಭುಜ ಹಿಡಿದು ಅಲ್ಲಿಯೇ ನಿಲ್ಲಿಸಿದ್ದರು. ಕೊನೆಗೆ ಆಕೆ ಈ ಗುಂಪು ಫೋಟೋದಲ್ಲಿ ಎದುರುಗಡೆ ನಿಲ್ಲಬೇಕಾಗಿ ಬಂದಿತ್ತು.
ಈ ಹಿಂದೆ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಕೂಡ ದೂರುದಾರರ ಆರೋಪಗಳನ್ನು ಪುಷ್ಠೀಕರಿಸಿದ್ದರು.