ಸಿಡಿಲು ಬಡಿದು ಇಬ್ಬರು ರೈತರು ಮೃತ್ಯು

ದಾವಣಗೆರೆ : ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಜಮೀನೊಂದರಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆ ಹುಣಸೆ ಮರದ ಅಡಿ ಕುಳಿದ್ದ ಇಬ್ಬರು ವ್ಯಕ್ತಿಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ವರದಿಯಾಗಿದೆ.
ಮೃತರನ್ನು ಕಾಟಲಿಂಗಪ್ಪ (40) ಮತ್ತು ಈರಪ್ಪ ಎಂಬುವರ ಪುತ್ರ ರಾಜಪ್ಪ (35) ಎಂದು ತಿಳಿದು ಬಂದಿದೆ.
ಘಟನೆ ವಿವರ: ಮೊನ್ನೆ ಸುರಿದ ಭಾರಿ ಮಳೆಗೆ ಭೂಮಿ ಹದವಾಗಿದ್ದು ಶುಕ್ರವಾರ ಬಿತ್ತನೆ ಮಾಡಲು ಹೋಗಿದ್ದ ಇಬ್ಬರು ರೈತರು ಸಿಡಿಲಿಗೆ ಬಲಿಯಾಗಿದ್ದಾರೆ. ಗಾಳಿ ಮತ್ತು ಮಳೆ ಇದ್ದಕಾರಣ ಆಶ್ರಯಕ್ಕಾಗಿ ಹುಣಸೇ ಮರದ ಕೆಳಗೆ ಹೋಗಿದ್ದ ಕಾಟಲಿಂಗಪ್ಪ ಮತ್ತು ರಾಜಪ್ಪ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story