ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಆನ್‌ಲೈನ್‌ನಲ್ಲಿ ವಂಚನೆ
ಉಡುಪಿ, ಜೂ.9: ಓಎಲ್‌ಎಕ್ಸ್‌ನಲ್ಲಿನ ಹಳೆ ಫರ್ನಿಚರ್ ಖರೀದಿಸುವುದಾಗಿ ನಂಬಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಆನ್‌ಲೈನ್ ಮೂಲಕ ಸಾವಿರಾರು ರೂ. ಹಣ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಜಿಬೆಟ್ಟು ಅಪಾರ್ಟ್‌ಮೆಂಟ್‌ನ ನಿವಾಸಿ ಟಿ.ಜಿ ಶೇಷಶಯನ(61) ಎಂಬವರು ಜೂ.8ರಂದು ಹಳೆಯ ಫರ್ನಿಚರ್ ಮಾರಾಟಕ್ಕೆ ಇರುವ ಬಗ್ಗೆ ಓಎಲ್‌ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನನಗೆ ಹಳೆಯ ಫರ್ನಿಚರ್ ಬೇಕು ಎಂದು ಹೇಳಿ, ತಾನು ಹೇಳಿದಂತೆ ಗೂಗಲ್ ಪೇ/ಫೋನ್ ಪೇ/ ಪೆಟಿಎಂ ವ್ಯವಹಾರ ಮಾಡಲು ತಿಳಿಸಿದರು.
ಆಗ ಟಿ.ಜಿ.ಶೇಷಶಯನ ಅವರಿಗೆ ಫರ್ನಿಚರ್ ಖರೀದಿಸುವುದಾಗಿ, ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ, ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 73,998 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story