ಉಡುಪಿ: ಮೆಸ್ಕಾಂ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್ ವಂಚನೆ

ಉಡುಪಿ, ಜೂ.9: ಮೆಸ್ಕಾಂ ಅಧಿಕಾರಿ ಹೆಸರಿನಲ್ಲಿ ಬಾಕಿ ವಿದ್ಯುತ್ ಹಣ ಪಾವತಿಸುವಂತೆ ಹೇಳಿ ಕರೆ ಮಾಡಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೂರಿನ ಎಂ.ಗುರುರಾಜ್ ಭಟ್ ಎಂಬವರಿಗೆ ಜೂ.8ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ಮೆಸ್ಕಾಂ ಅಧಿಕಾರಿ ಎಂದು ಹೇಳಿ ಕರೆ ಮಾಡಿ, ನಿಮ್ಮ ಹಿಂದಿನ ಬಾಕಿ ಇರುವ ಕರೆಂಟ್ ಬಿಲ್ಲನ್ನು ಈ ಕೂಡಲೇ ಕಟ್ಟಬೇಕು ಎಂದು ಹೇಳಿದನು. ಇದನ್ನು ನಂಬಿಸಿ ಗುರುರಾಜ್ ಭಟ್ ಅವರಿಂದ ಓಟಿಪಿಯನ್ನು ಪಡೆದು, ಅವರ ಖಾತೆ ಯಿಂದ ಒಟ್ಟು 1,79,130ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿ ಕೊಂಡು ವಂಚನೆ ಮಾಡಿರುವುದಾಗಿ ದೂರಲಾಗಿದೆ.
Next Story