ಮಂಗಳೂರು: ಮೆಡಿಕಲ್ ಪ್ರತಿನಿಧಿ ನಾಪತ್ತೆ

ಮಂಗಳೂರು, ಜೂ.9: ನಗರದ ಕಂಪೆನಿಯೊಂದರಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡಿದ್ದ ಬಿಕರ್ನಕಟ್ಟೆ ಸಮೀಪದ ಕಂಡೆಟ್ಟು ನಿವಾಸಿ ತೇಜ ಕುಮಾರ್ (26) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿವೆ.
ಜೂ.6ರಂದು ತನ್ನ ತಾಯಿಗೆ ಕರೆ ಮಾಡಿ ಮೀಟಿಂಗ್ ಇರುವುದರಿಂದ ಜೂ.7ರಂದು ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story