Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. 90 ಮನೆಗಳಿಗೆ ಉಚಿತ ನೀರು ಪೂರೈಸುತ್ತಿರುವ...

90 ಮನೆಗಳಿಗೆ ಉಚಿತ ನೀರು ಪೂರೈಸುತ್ತಿರುವ ಸಂತೋಷ್ ಕರ್ಕೇರ !

►ಕಿದಿಯೂರಿನ ಯುವಕನಿಂದ ನಿಸ್ವಾರ್ಥ ಸೇವೆ ►ಪ್ರತಿದಿನ 9 ಗಂಟೆಗಳ ಕೆಲಸ

9 Jun 2023 4:44 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
90 ಮನೆಗಳಿಗೆ ಉಚಿತ ನೀರು ಪೂರೈಸುತ್ತಿರುವ ಸಂತೋಷ್ ಕರ್ಕೇರ !
►ಕಿದಿಯೂರಿನ ಯುವಕನಿಂದ ನಿಸ್ವಾರ್ಥ ಸೇವೆ ►ಪ್ರತಿದಿನ 9 ಗಂಟೆಗಳ ಕೆಲಸ

ಉಡುಪಿ, ಜೂ.9: ಮುಂಗಾರು ಮಳೆಯ ವಿಳಂಬದಿಂದಾಗಿ ಉಡುಪಿಯಲ್ಲಿ ನೀರಿನ ಸಮಸ್ಯೆ ಸಾಕಷ್ಟು ಬಿಗಡಾಯಿಸಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ಮಧ್ಯೆ ಇಲ್ಲೊಬ್ಬ ಯುವಕ ತಮ್ಮ ಮನೆಯ ಸುತ್ತಮುತ್ತಲಿನ 90 ಮನೆಗಳಿಗೆ ಉಚಿತವಾಗಿ ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಈ ಮೂಲಕ ತನ್ನ ಊರಿನ ನೀರಿನ ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಡ್ಡಿ ನಿವಾಸಿ ಸಂತೋಷ್ ಕರ್ಕೇರ (33) ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಿದಿಯೂರು ಗ್ರಾಮದ ದಡ್ಡಿ ಎಂಬಲ್ಲಿ ನೂರಾರು ಮನೆಗಳಿದ್ದು, ಮಳೆ ಇಲ್ಲದೆ ಎಲ್ಲರ ಮನೆಗಳ ಬಾವಿಯ ನೀರು ಪಾತಾಳಕ್ಕೆ ಇಳಿದಿದೆ. ಅದೇ ರೀತಿ ಈ ಬಾವಿಗಳ ನೀರಿನಲ್ಲಿ ಉಪ್ಪಿನಾಂಶ ಸೇರಿಕೊಂಡಿರುವುದರಿಂದ ನಿತ್ಯದ ಬಳಕೆ ಯೋಗ್ಯವಾಗಿಲ್ಲ. ಈ ಮಧ್ಯೆ ಗ್ರಾಪಂನಿಂದಲೂ ಸರಿಯಾಗಿ ನೀರು ಕೂಡ ಪೂರೈಕೆ ಆಗದೆ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಇದರಿಂದ ಮಹಿಳೆಯರು ಈ ಉರಿ ಬಿಸಿಲಿನಲ್ಲೂ ಮೈಲುಗಟ್ಟಲೆ ನಡೆದು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸಂತೋಷ್ ತಮ್ಮ ಮನೆಯಿಂದ ಸುಮಾರು 2ಕಿ.ಮೀ. ದೂರದಲ್ಲಿರುವ ಐರಿನ್ ಅಂದ್ರಾದೆ ಎಂಬವರ ಬಾವಿಯಿಂದ ಮನೆಗೆ ನೀರು ತರುತ್ತಿದ್ದರು. ಇದೇ ವೇಳೆ ಇವರು ತಮ್ಮ ನೆರೆಮನೆಯವರಿಗೂ 8-10 ಕೊಡಪಾನ ನೀರನ್ನು ಕೊಡುತ್ತಿದ್ದರು. ಬಳಿಕ ಸುತ್ತಮುತ್ತಲಿನ ಮನೆಯವರು ಕೂಡ ನೀರು ಕೇಳಲು ಆರಂಭಿಸಿದರು. ಅದಕ್ಕಾಗಿ ಸಂತೋಷ್, ತನ್ನ ಗೆಳೆಯ ಪವನ್ ಎಂಬವರ ವಾಹನವನ್ನು ಪಡೆದು ನೆರೆಮನೆಯವರ ಸಿಂಟೆಕ್ಸ್ ಟ್ಯಾಂಕಿಯನ್ನು ಒಟ್ಟು ಮಾಡಿ ನೀರು ಪೂರೈಸಲು ಆರಂಭಿಸಿದರು. ಇದು ಹೀಗೆ ವಿಸ್ತಾರಗೊಂಡು ಈಗ ಇವರು ತಮ್ಮ ಊರಿನ 90 ಮನೆಗಳಿಗೆ ಒಂದು ದಿನ ಬಿಟ್ಟು ಒಂದು ದಿನ ನೀರು ಕೊಡುವ ಕಾರ್ಯ ಮಾಡುತ್ತಿದ್ದಾರೆ.

‘ಒಂದು ತಿಂಗಳ ಹಿಂದೆ ಮನೆಯಲ್ಲಿ ನೀರಿನ ಸಮಸ್ಯೆ ತಲೆದೋರಿತು.  ಇದರಿಂದ ನಾವು ತುಂಬಾ ತೊಂದರೆ ಅನುಭವಿಸುತ್ತಿದ್ದೆವು. ಈ ಬಗ್ಗೆ ಗ್ರಾಪಂ ಮನವಿ ಮಾಡಿದರೂ ಒಂದು ತಿಂಗಳಲ್ಲಿ ನಾಲ್ಕು ಬಾರಿ ಟ್ಯಾಂಕರ್ ನೀರು ಕೊಟ್ಟಿದ್ದರು. ಬಳಿಕ ಸಮಪರ್ಕವಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ. ಹಾಗೆ ನಾನು ನಮ್ಮ ಮನೆಯ ಸುತ್ತಮುತ್ತಲಿನ 17 ಮನೆಗಳಿಗೆ  ನೀರು ಕೊಡುವ ಯೋಜನೆ ಹಾಕಿಕೊಂಡೆ. ಅದು ವಿಸ್ತಾರಗೊಂಡು ಈಗ ಒಂದು ದಿನಕ್ಕೆ 45 ಮನೆಗಳಿಗೆ ಅಂದರೆ ಒಂದು ದಿನ ಬಿಟ್ಟು ಒಂದು ದಿನಕ್ಕೆ ಒಟ್ಟು 90 ಮನೆಗಳಿಗೆ ಉಚಿತವಾಗಿ ನೀರು ಕೊಡುತ್ತಿದ್ದಾನೆ’ ಎಂದು ಸಂತೋಷ ಕರ್ಕೇರ ತಿಳಿಸಿದರು.

‘ಇನ್ನು ಹೆಚ್ಚಿನ ಮನೆಯವರು ನೀರು ಕೇಳುತ್ತಿದ್ದಾರೆ. ಆದರೆ ನನಗೆ ಸಮಯ ಸಾಕಾಗುವುದಿಲ್ಲ. ಒಂದು ಬಾರಿ ನೀರು ತರಲು ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಹೀಗೆ ದಿನಕ್ಕೆ ಆರು ಟ್ರಿಪ್ ಮಾಡಿದರೆ ಪ್ರತಿದಿನ 9 ಗಂಟೆ ಇದಕ್ಕೆ ಸಮಯ ಮೀಸಲಿಡಬೇಕಾಗಿದೆ. ಒಮ್ಮೊಮ್ಮೆ ರಾತ್ರಿ ಮನೆಗೆ ಹೋಗುವಾಗ 10 ಗಂಟೆ ಕೂಡ ಆಗುತ್ತದೆ. ನಮಗೆ ವಿಶ್ರಾಂತಿಯೇ ಸಿಗುತ್ತಿಲ್ಲ. ಆದರೂ ಜನರಿಗೆ ಸೇವೆ ಮಾಡುವುದರಲ್ಲಿ ನನಗೆ ತೃಪ್ತಿ ಸಿಗುತ್ತಿದೆ’ ಎಂದು ಅವರು ಹೇಳಿದರು.

"ನಮ್ಮ ಊರಿನಲ್ಲಿ ನೀರಿನ ಸಮಸ್ಯೆಯ ಗಂಭೀರತೆಯನ್ನು ಅರಿತು ಈ ಕೆಲಸಕ್ಕೆ ಮುಂದಾಗಿದ್ದೇನೆ. ಇಂದಿಗೆ 22 ದಿನಗಳು ಆಗಿದೆ. ಪ್ರತಿದಿನವೂ ನೀರು ಕೊಡುವ ಕೆಲಸ ಮಾಡುತ್ತಿದ್ದೇನೆ. ಒಂದು ಮನೆಗೆ 230 ಲೀಟರ್‌ನಂತೆ ಎರಡು ದಿನಗಳಿಗೊಮ್ಮೆ ನೀರು ಕೊಡುತ್ತಿದ್ದೇನೆ. ಇದರಿಂದ ಜನ ಸಂತೃಪ್ತರಾಗಿದ್ದಾರೆ"
-ಸಂತೋಷ್ ಕರ್ಕೇರ

"ಕಿದಿಯೂರು ಪಡುಪಡ್ಡಿಯಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಗ್ರಾಪಂ ನೀರು ಕೂಡ ಸ್ವಲ್ಪ ದಿನ ಬರುತ್ತಿರಲಿಲ್ಲ. ಸಂತೋಷ್ ತನ್ನ ಮನೆಗೆ ದೂರದಿಂದ ತರುತ್ತಿದ್ದ ನೀರಿನಲ್ಲಿ 10 ಕೊಡ ನೀರು ನಮಗೂ ಕೊಡುತ್ತಿದ್ದರು. ಮುಂದೆ ಎಲ್ಲ ಮನೆಗೆ ನೀರು ಕೊಡಲು ಆರಂಭಿಸಿದರು. ಈಗ ಎರಡು ದಿನಕ್ಕೊಮ್ಮೆ ಹಲವು ಮನೆಗಳಿಗೆ ಕುಡಿಯಲು ನೀರು ಕೊಡುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಉಪಕಾರ ಆಗುತ್ತಿದೆ. ಇಲ್ಲದಿದ್ದರೆ ನಾವು ಈ ಬಿಸಿಲಿನಲ್ಲಿ ಒಂದು ಮೈಲು ನಡೆದು ನೀರು ತರಬೇಕು"
-ಚಂದ್ರಿಕಾ, ಸ್ಥಳೀಯರು. 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X