ತುಮಕೂರು: ತಾಯಿಯಿಂದಲೇ ಮಗುವಿನ ಹತ್ಯೆ!

ಮಧುಗಿರಿ (ತುಮಕೂರು): ಮಹಿಳೆಯೊಬ್ಬಳು ತನ್ನ ಮಗುವನ್ನೇ ಹತೈಗೈದು ತಾನು ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ವರದಿಯಾಗಿದೆ.
ಪಟ್ಟಣದ ತಿಪ್ಪಾಪುರ ಛತ್ರದ ಹಿಂಭಾಗದಲ್ಲಿ ವಾಸವಾಗಿದ್ದ ಶ್ವೇತಾ (26) ಎನ್ನುವ ಮಹಿಳೆಯೊಬ್ಬಳು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನ ಒಂದು ವರ್ಷದ ಗಂಡು ಮಗನಾದ ಕೃತೀಶ್ ನ ಕೈಯನ್ನು ಚಾಕುವಿನಿಂದ ಕೊಯ್ದಿದ್ದು ರಕ್ತ ಸ್ರಾವ ಹೆಚ್ಚಾಗಿ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ನಂತರ ಆಕೆ ಕೂಡ ಆತ್ಮ ಹತ್ಯೆಗೆ ಮುಂದಾಗಿದ್ದು, ನೆರೆಹೊರೆಯವರ ಸಹಾಯದಿಂದ ಶ್ವೇತಾಳನ್ನು ತುಮಕೂರು ಜಿಲ್ಲಾ ಆಸ್ಪತ್ರೆ ಗೆ ರವಾನಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಹೇಳಲಾಗಿದೆ.
ಶಿವಾನಂದ ಅವರ ಪತ್ನಿಯಾದ ಶ್ವೇತಾ ಮಾನಸಿಕ ಅಸ್ವಸ್ಥೆಯಾಗಿದ್ದು, ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story