ಕಳಸ: ಒಡಿಶಾ ರೈಲು ದುರಂತದಲ್ಲಿ ಪಾರಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಚಿಕ್ಕಮಗಳೂರು : ಒಡಿಶಾ ರೈಲು ಅಪಘಾತದಿಂದ ಪಾರಾಗಿದ್ದ ಯಾತ್ರಿಕರೊಬ್ಬರು ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ (72) ಎಂದು ಗುರುತಿಸಲಾಗಿದೆ. ಕಳಸದಿಂದ ಸುಮೇದ್ ಶಿಖರ್ಜಿಗೆ ಯಾತ್ರೆ ಹೋಗಿದ್ದ 110 ಜನ ಕನ್ನಡಿಗರ ಪೈಕಿ ಇವರೂ ಒಬ್ಬರಾಗಿದ್ದರು.
ಸುಮೇದ್ ಶಿಖರ್ಜಿಯಿಂದ ಹಿಂದಿರುಗುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಸಂಬಂಧಿಕರು ಶವಪರೀಕ್ಷೆಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story