ಮದುವೆ ಸಿದ್ಧತೆಗೆ ಊರಿಗೆ ಆಗಮಿಸುತ್ತಿದ್ದ ಬೆಳಗಾವಿ ಮೂಲದ ಯೋಧ ರೈಲಿನಿಂದ ಬಿದ್ದು ಮೃತ್ಯು

ಬೆಳಗಾವಿ: ಮದುವೆಗೆ ಸಿದ್ಧತೆ ನಡೆಸಲು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ ಬೆಳಗಾವಿ ಮೂಲದ ಯೋಧನೋರ್ವ ಆಕಸ್ಮಿಕವಾಗಿ ರೈಲಿನಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಪಂಜಾಬ್ನ ಲೂಧಿಯಾನ ರೈಲು ನಿಲ್ದಾಣದ ಸಮೀಪದಲ್ಲಿ ವರದಿಯಾಗಿದೆ.
ಗುರುವಾರ (ಜೂ.8) ಈ ಘಟನೆ ನಡೆದಿದ್ದು, ಮೃತ ಯೋಧನನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಕಾಶಿನಾಥ್ ಶಿಂಧಿಗಾರ (28) ಎಂದು ಗುರುತಿಸಲಾಗಿದೆ.
8 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಯೋಧ ಕಾಶಿನಾಥ್ಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಆಗಿತ್ತು. ಮದುವೆಯ ದಿನಾಂಕ ನಿಗದಿ ಮಾಡಲು ಪಾಲಕರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಶಿನಾಥ್, ಪಂಜಾಬ್ನಿಂದ ರೈಲು ಮೂಲಕ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದರು. ಆದರೆ, ಮಾರ್ಗಮಧ್ಯೆ ಕಾಲು ಜಾರಿ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ; ತುಮಕೂರು: ತಾಯಿಯಿಂದಲೇ ಮಗುವಿನ ಹತ್ಯೆ!
Next Story