Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್...

ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಡಬಹುದಾದ ಹೊಸ ಹೊಳಹಿನ ಕಾರ್ಯಕ್ರಮಗಳು

ಕೆ.ಪಿ. ಸುರೇಶಕೆ.ಪಿ. ಸುರೇಶ10 Jun 2023 12:25 PM IST
share
ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಡಬಹುದಾದ ಹೊಸ ಹೊಳಹಿನ ಕಾರ್ಯಕ್ರಮಗಳು

ಗ್ರಾಮೀಣಾಭಿವೃದ್ಧಿ ಇಲಾಖೆಯು ಕರ್ನಾಟಕದ ಮಳೆ ಆಶ್ರಿತ ಪ್ರದೇಶದ ಕೃಷಿ, ಪೂರಕ ಜೀವನೋಪಾಯಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಆದರೆ ಈ ಯೋಜನೆಗಳೂ ಕಾಲಕಾಲದ ಸವಾಲುಗಳು ಸ್ಥಿತಿಗತಿಗೆ ತಕ್ಕಂತಹ flexibilityಯನ್ನು ತೋರಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು.

ಉದಾಹರಣೆಯಾಗಿ ಕೆಲವನ್ನು ಸೂಚಿಸಬಯಸುವೆ

೧. ಗ್ರಾಮೀಣಾಭಿವೃದ್ಧಿಯ ಕುಡಿಯುವ ನೀರಿನ ಯೋಜನೆಯಾದ ಜಲ್ ಜೀವನ್ ಮಿಷನ್‌ನಲ್ಲಿ ಬಹುಮುಖ್ಯ ಅಂಶವಾದ community mobilization. ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿಲ್ಲ ಎಂಬುದು ಇಲಾಖೆಯ ವರದಿಗಳೇ ಹೇಳುತ್ತಿವೆ. ಇದನ್ನು ಸಾಧಿಸಲು ಯೋಜನಾ ಬೆಂಬಲ ಏಜೆನ್ಸಿಗಳನ್ನು ನೇಮಿಸಲಾಗಿದ್ದು ಈ ಸಂಸ್ಥೆಗಳ ಕಾರ್ಯಕ್ಷಮತೆ ಬಗ್ಗೆ ಪರಾಮರ್ಶನ ನಡೆಯಬೇಕಿದೆ. ಹಾಗೆಯೇ ಈ ಯೋಜನೆಯ ಕಾಣ್ಕೆ ಮತ್ತು ಗುರಿ (vision & goal)ಯನ್ನು ವಿಸ್ತರಿಸಬೇಕಿದೆ.

ನಮ್ಮ ಹಳ್ಳಿಗಳಲ್ಲಿ  ಶೇ. ೯೦ರಷ್ಟು ನೀರಿನ ಬಳಕೆ  ಕೃಷಿಗಾಗಿ ಬಳಕೆಯಾಗುತ್ತಿದೆ. ಕುಡಿಯುವ ನೀರು ಬಹು ಮುಖ್ಯ ಆದರೆ ಪ್ರಮಾಣದಲ್ಲಿ ಎಷ್ಟೋ ಪಟ್ಟು ಜಾಸ್ತಿ ಇರುವ ಕೃಷಿಯ ನೀರಿನ ಬಳಕೆ ಬಗ್ಗೆ ಈ ನೀರಿನ ಬಳಕೆಯ ಪ್ರಸ್ತುತತೆ ವಿಸ್ತಾರವಾಗದಿದ್ದರೆ ಅದಕ್ಕೆಂದೇ ಇನ್ನೊಂದು ಏಜೆನ್ಸಿಯನ್ನು ತಂದು ಅರಿವು ಮೂಡಿಸುವುದು ಕಷ್ಟ.

೨. ಈ ದೃಷ್ಟಿಯಿಂದ ಇಲಾಖೆಯು  ಕೃಷಿ ಹೊಂಡಗಳ  ಸೃಷ್ಟಿಯಷ್ಟೇ ಅಲ್ಲ, ಅವುಗಳಲ್ಲಿ ಆಗುತ್ತಿರುವ ನೀರಿನ ಸಂಗ್ರಹ ಮತ್ತು ಉಪಯೋಗದ ಒಂದು ಲೆಕ್ಕ ಪರಿಶೋಧನೆಯನ್ನು ತಕ್ಷಣವೇ ಮಾಡಬೇಕು. ಮುಖ್ಯವಾಗಿ ಆ ಕೃಷಿ ಹೊಂಡದ ಕಿರು ಜಲಾನಯನ ಪ್ರದೇಶದ ಗರಿಷ್ಠ ಮಳೆನೀರಿನ ಸಂಗ್ರಹವಾಗಿದೆಯೇ  ಎಂಬುದರ ತಖ್ತೆ ಮುಖ್ಯ.

೩.  ಕೊಳವೆ ಬಾವಿಯೆಂಬುದನ್ನು ಖಾಸಗಿ ಸಂಪನ್ಮೂಲವೆಂಬಂತೆ ಸರಕಾರ ಭಾವಿಸಿ ಅದಕ್ಕೆ ಕಾನೂನಾತ್ಮಕ ಚೌಕಟ್ಟೂ ನೀಡಿದೆ. ಆದರೆ ಮೂಲತಃ ಅದು ಅಕ್ಕ ಪಕ್ಕದ ಜಮೀನಿನ  ನೀರಿನ ಇಂಗುವಿಕೆಯ ಫಲ.  ಆರ್ಥಿಕ ಶಕ್ತಿಯೇ ಕೊಳವೆ ಬಾವಿ ಹೊಂದುವ ಮೂಲಭೂತ  ಸೂಚಿ. ಇದನ್ನು ಹೊಂದಿಕೊಂಡಂತೆ ಈ ರೈತರಿಗೆ ಉಚಿತ ವಿದ್ಯುತ್, ಉದ್ಯೋಗ ಖಾತರಿಯಲ್ಲಿ ತೋಟಗಾರಿಕಾ ಬೆಳೆಗೆ ಅವಕಾಶ  ಹೀಗೆ ಈ ಸವಲತ್ತುಗಳು ಮಳೆ ಆಶ್ರಿತ ಕೃಷಿ ಪ್ರದೇಶದಲ್ಲಿ Haves& Have nots ಕಂದರವನ್ನು ಸೃಷ್ಟಿಸುತ್ತಿದೆ. ಇದನ್ನು ಒಪ್ಪಿಕೊಂಡೂ ಕನಿಷ್ಠ ಈ ಕೊಳವೆ ಬಾವಿಗಳಿಗೆ ನೀರಿಂಗಿಸುವ ರಚನೆಯನ್ನು ಕಡ್ಡಾಯ ಮಾಡದಿದ್ದರೆ ಅದೊಂದು ಗುರುತರ ಲೋಪವಾಗುತ್ತದೆ. ಈ ನೀರಿಂಗಿಸುವ ಕಾಮಗಾರಿಯನ್ನು  ಕಡ್ಡಾಯಗೊಳಿಸುವತ್ತ ಇಲಾಖೆ ಕಾರ್ಯತಂತ್ರ ರೂಪಿಸಬೇಕಿದೆ.

೪. ಇದಕ್ಕೆ ತತ್ಸಮಾನವಾಗಿ ಸೀಸನಲ್ ಬೆಳೆ ಬೆಳೆಯುವ ರೈತನಿಗೆ ಯಾವ ಸೌಲಭ್ಯವೂ ಇಲ್ಲ. ಆದ್ದರಿಂದ ಸರಕಾರ ಎಲ್ಲಾ ರೈತರಿಗೂ ವರ್ಷಕ್ಕೆ ಕನಿಷ್ಠ ೫೦ ದಿನಗಳ ಕೂಲಿ ಸೌಲಭ್ಯವನ್ನು  ಉದ್ಯೋಗ ಖಾತರಿ ಮೂಲಕ ಒದಗಿಸಬೇಕು.

೫. ನಮ್ಮ ಹಳ್ಳಿಗಳನ್ನು ನೋಡಿದರೆ ತಂತಿ ಬೇಲಿ ರೈತನೊಬ್ಬನ ಬಂಡವಾಳ ಕ್ಷಮತೆಯ ಲಕ್ಷಣ. (ಕೊಳವೆ ಬಾವಿ ಕೂಡಾ)  ಬೇಲಿ ಇಲ್ಲದೆ ಒಂದು ಗಿಡವನ್ನೂ ನೆಡಲಾರದೆ, ನೆಟ್ಟರೂ ಉಳಿಸಿಕೊಳ್ಳಲಾರದೆ ಕೈಹಿಸುಕಿಕೊಳ್ಳುತ್ತಿರುವ ಸಹಸ್ರಾರು ರೈತರಿದ್ದಾರೆ.  ಆದ್ದರಿಂದ ಸರಕಾರ ಉದ್ಯೋಗ ಖಾತರಿ ಮೂಲಕ ಕನಿಷ್ಠ ೨ ಎಕರೆ ಒಂದೇ ತಾಕಿನಲ್ಲಿರುವ ರೈತರಿಗೆ ತಂತಿ ಬೇಲಿಯ ಸೌಲಭ್ಯವನ್ನು ಉದ್ಯೋಗ ಖಾತರಿ ಮೂಲಕ ನೀಡಬೇಕು  ಈ ಬೇಲಿ ಇದ್ದರೆ ಗಿಡ ನೆಡುವ  ಆಸೆ ಎಂಥಾ ರೈತನಿಗೂ ಬರುತ್ತೆ! ಇದಕ್ಕೆ ಸೂಕ್ತ ಶರತ್ತುಗಳನ್ನು ಹಾಕಬಹುದು (ಉದಾ:   ಈ ಫಲಾನುಭವಿ ಕನಿಷ್ಠ ೧೦೦ ಒಣ ಭೂಮಿ ತೋಟಗಾರಿಕೆ ಗಿಡಗಳನ್ನು ಬೆಳೆಸಬೇಕು ಇತ್ಯಾದಿ.) ರಬ್ಬರ್ ಬೋರ್ಡ್ ಒಣ ಭೂಮಿಯಲ್ಲಿ ರಬ್ಬರ್ ಬೆಳೆಯನ್ನು ಪ್ರೋತ್ಸಾಹಿಸಿದಾಗ ತಂತಿ ಬೇಲಿಗೂ ಸಬ್ಸಿಡಿ ನೀಡುತ್ತಿತ್ತು. ಈ ಸಬ್ಸಿಡಿ ಇಲ್ಲದಿದ್ದರೆ ರಬ್ಬರ್ ಇಂದು ಬೆಳೆಯುತ್ತಿರಲಿಲ್ಲ.

೬. ಘನ ತ್ಯಾಜ್ಯ ನಿರ್ವಹಣೆಗೆ ಸರಕಾರ ಆದ್ಯತೆ ನೀಡುತ್ತಿದ್ದು ಇದರ ನಿರ್ವಹಣಾ ಜವಾಬ್ದಾರಿಯನ್ನು  ಸ್ವಸಹಾಯ ಸಂಘಗಳಿಗೆ ನೀಡುತ್ತಿರುವುದು ಶ್ಲಾಘನೀಯ. ಆದರೆ ನಮ್ಮ ಹಳ್ಳಿಗಳ ಶೇ. ೯೦ ಘನ ತ್ಯಾಜ್ಯ ಪುನರ್ಬಳಕೆ ಮಾಡಬಹುದಾದ ಕೃಷಿ ತ್ಯಾಜ್ಯಗಳೇ. ಇವೆಲ್ಲಾ ರಸ್ತೆ ಬದಿ ಆಯಾ ರೈತನ ಅನಾಮಿಕ ಅಧಿಕೃತತೆಯ ಗುಪ್ಪೆಗಳಾಗಿ ಕೂತಿವೆ. ಈ ತಿಪ್ಪೆರಾಶಿಗೆ ಮೊದಲಿನ ಶ್ರದ್ಧೆಯೂ ಇಲ್ಲ. ಗುಣ ಮಟ್ಟವೂ ಇಲ್ಲ. ಇದೇ ವೇಳೆ ನಡೆಪ್ ಗೊಬ್ಬರದ ಗುಂಡಿ ನಿರ್ಮಾಣಕ್ಕೆ ಉದ್ಯೋಗ ಖಾತರಿಯಲ್ಲಿ ಅವಕಾಶವಿದೆ. ಆದರೆ ಈ ನಿಯಮಾವಳಿಗಳು ರೈತ ಲೋಕದ ವಾಸ್ತವವನ್ನೇ ಅರಿಯದ ಜಡ ನಿಯಮಗಳಾಗಿ ಕೂತಿವೆ. ರೈತನ ಹೊಲದಲ್ಲಿ ಈ ಗುಂಡಿ ನಿರ್ಮಾಣವಾಗಬೇಕು ಎಂಬ ನಿಯಮ ಇದು. ಬಯಲು ಸೀಮೆಯ ಶೇ. ೯೯ ರೈತರ ಒಣ ಭೂಮಿ ಅವರ ಮನೆಯಿಂದ ಮೈಲು ದೂರದಲ್ಲಿರುತ್ತದೆ. ಅಲ್ಲಿ ಬೇಲಿಯೂ ಇಲ್ಲ, ನೀರೂ ಇಲ್ಲ. ದಿನದಿನದ  ಹುಲ್ಲು, ಸೆಗಣಿ ಸಾಗಿಸುವುದು ಸಾಧ್ಯವೇ ಇಲ್ಲ. ಜೊತೆಗೇ ಬೆಳೆ ತ್ಯಾಜವನ್ನು ಅಲ್ಲಿ ರಾಶಿ ಹಾಕುವ ಕ್ರಮವೂ ಇಲ್ಲ

 ಆದರೆ ಈಗಿರುವಂತೆ ರಸ್ತೆಯ ಇಕ್ಕೆಲಗಳ ಈ ತಿಪ್ಪೆರಾಶಿ ಬಹುತೇಕ ಪಂಚಾಯತ್ ಭೂಮಿ! ಈ ಇಕ್ಕೆಲಗಳಲ್ಲಿ ಪಂಚಾಯತ್ ಮೂಲಕ ಸಾಲು ಸಾಲು ನಡೆಪ್ ಪೆಟ್ಟಿಗೆಗಳನ್ನು ಕಟ್ಟಿಸಿ ಅವುಗಳನ್ನು ರೈತರಿಗೆ ಉಪಯೋಗಕ್ಕಾಗಿ ಕೊಟ್ಟರೆ ಬೇಕಾದಷ್ಟಾಯಿತು. ಘನ ತ್ಯಾಜ್ಯವೂ ಚೆಲ್ಲಾಪಿಲ್ಲಿಯಾಗುವುದು ನಿಲ್ಲುತ್ತದೆ. ಸತ್ವಯುತ ಗೊಬ್ಬರವೂ ಆಗುತ್ತದೆ.  ಇದೆಲ್ಲಾ ಸಣ್ಣ ಪುಟ್ಟ ಮಾರ್ಪಾಟುಗಳ ಮೂಲಕ ಸಾಧ್ಯ. ಈ ಗೊಬ್ಬರದ ತಯಾರಿಯೇ ಮಣ್ಣಿನ ಗುಣಮಟ್ಟ ಸುಧಾರಣೆಗೂ, ಸುಸ್ಥಿರ ಕೃಷಿಗೂ ಅಡಿಪಾಯ.

೭. ಹವಾಮಾನ ಬದಲಾವಣೆ ಯೆಂಬುದು ವಿಜ್ಞಾನಿಗಳ observationನಿಂದಾಚೆ ರೈತರ ಲೋಕ ಪ್ರವೇಶಿಸಿಯಾಗಿದೆ. ಇದಕ್ಕೆ ಹವಾಮಾನ ಬದಲಾವಣೆ ನಿರೋಧಕ ತಳಿ ಇತ್ಯಾದಿ ಕೃಷಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದೊಂದು ಸದ್ಯಕ್ಕೆ ಆಗದ ಮಾತು.  ಪಂಚಾಯತ್ ರಾಜ್ ಇಲಾಖೆಯ ಮೂಲಕ ಹಂಗಾಮಿನ ಮೊದಲು  ರೈತ ಸಭೆಯನ್ನು ಏರ್ಪಡಿಸಿ ಕಳೆದ ಹಂಗಾಮಿನ ಮಳೆಯ ಏರಿಳಿತಗಳಿಂದಾಗಿ ಆಯಾ ಗ್ರಾಮದ ಕೃಷಿ/ ಬೆಳೆಗಳಿಗೆ ಏನು ಪರಿಣಾಮವಾಯಿತು ಎಂಬ ಬಗ್ಗೆ ಒಂದು ಚರ್ಚೆ ಏರ್ಪಡಿಸುವುದು ಕಷ್ಟವಲ್ಲ. ಹಾಗೆಯೇ ಹಂಗಾಮು ಮುಗಿದ ಮೇಲೆ ಈ ಬಾರಿ ಏನಾಯಿತು ಎಂಬ ಚರ್ಚೆಯನ್ನೂ.

ಸ್ಥಳೀಯ  ಅನುಭವದ ಮೂಲಕ ಯಾವ ತಳಿ ಇದನ್ನು ತಡೆದೂ  ಉಳಿಯಿತು ಇತ್ಯಾದಿ ಮಾಹಿತಿ ದಾಖಲಿಸಿದರೆ ರೈತರೇ ಅನುಭವಾಧಾರಿತವಾಗಿ ಹೊಂದಿಕೊಳ್ಳುವ ಮಾರ್ಗೋಪಾಯಗಳನ್ನು ಕಲಿಯುತ್ತಾರೆ. ಈ ಸಭೆಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಸುಸ್ಥಿರ ಕೃಷಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನೀಡಬಹುದು. ಹಾಗೆಯೇ ಸ್ಥಳೀಯ ಶಾಲಾ ಕಾಲೇಜುಗಳ ವಿಜ್ಞಾನ ಶಿಕ್ಷಕ ಉಪನ್ಯಾಸಕರನ್ನೂ, ಸಾಧಕ ರೈತರನ್ನೂ ಒಳಗೊಳ್ಳಬಹುದು.

ಒಂದೆಡೆ ಭೌತಿಕ ಅನುಕೂಲಗಳನ್ನು ಅತಿರಿಕ್ತವಾಗಿ ನೀಡುತ್ತಾ ; ಇನ್ನೊಂದೆಡೆ ನೀರು, ಮಣ್ಣು, ಕುರಿತಾಗಿ ಅರಿವು ಮೂಡಿಸುವ ಕೆಲಸವನ್ನು ಏಕಕಾಲಕ್ಕೆ ಮಾಡಿದರಷ್ಟೇ ಗ್ರಾಮ ಭಾರತವನ್ನು ತಕ್ಕ ಮಟ್ಟಿಗೆ ಸಂಕಷ್ಟದಿಂದ ಪಾರು ಮಾಡಬಹುದು.

ಹಲವಾರು ಇಲಾಖೆಗಳು ತಮ್ಮ ತಮ್ಮ ಕಾರ್ಯ ಯೋಜನೆಯಂತೆ  ಕೆಲಸ ಮಾಡುತ್ತಿದ್ದರೆ ಪಂಚಾಯತ್ ಮಟ್ಟದಲ್ಲಿ ಯಾವುದೇ ಫಲಿತಾಂಶ ಬರುವುದು ಕಷ್ಟ. ಈಗಿರುವಂತೆ ಈ ಹಲವು ಆಯಾಮಗಳನ್ನು ಅನುಷ್ಠಾನದಲ್ಲಿ ಹೊಂದಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಇದನ್ನು ಸಾಧಿಸವುದು ಕಷ್ಟವಲ್ಲ.

share
ಕೆ.ಪಿ. ಸುರೇಶ
ಕೆ.ಪಿ. ಸುರೇಶ
Next Story
X