ಎಡಪದವು: ಯುವಕ ನಾಪತ್ತೆ

ಬಜ್ಪೆ, ಜೂ.10: ಇಲ್ಲಿನ ಎಡಪದವು ನಿವಾಸಿ ಮುಝಮ್ಮಿಲ್ (30) ಎಂಬ ಯುವಕ ಕಾಣೆಯಾಗಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಝಮ್ಮಿಲ್ ಮೇ 21ರ ಮಧ್ಯಾಹ್ನ 12 ಗಂಟೆಗೆ ಮನೆಯಿಂದ ಹೊರಹೊದವರು ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ಬದ್ರುದ್ದೀನ್ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುಝಮ್ಮಲ್ ನಾಪತ್ತೆಯಾದ ದಿನ ಬಿಳಿ ಬಣ್ಣದ ಅರ್ಧ ತೋಳಿನ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಅವರು ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಮುಝಮ್ಮಿಲ್ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಮಂಗಳೂರು ಪೊಲೀಸ್ ಕಂಟ್ರೋಲ್ ರೂಮ್ 0824-2220800, ಬಜ್ಜೆ ಪೊಲೀಸ್ ಠಾಣೆ 0824-2220531, ಪೊಲೀಸ್ ನಿರೀಕ್ಷಕರು 9480802313 ಅಥವಾ ಪೊಲೀಸ್ ಉಪ ನಿರೀಕ್ಷಕರು 8123317103 ಸಂಖ್ಯೆಗೆ ಮಾಹಿತಿ ನೀಡುವಂತೆ ಬಜ್ಪೆ ಪೊಲೀಸರು ವಿನಂತಿಸಿದ್ದಾರೆ.
Next Story