ಉಳ್ಳಾಲ: KMJ ವತಿಯಿಂದ ಜೂನ್ 11 ರಂದು ಸ್ಪೀಕರ್ ಯು.ಟಿ ಖಾದರ್ ಗೆ ಗೌರವಾರ್ಪಣೆ

ಉಳ್ಳಾಲ: ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ಝೋನ್ ಇದರ ಆಶ್ರಯದಲ್ಲಿ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ಇದರ ಸಹಭಾಗಿತ್ವದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆ ಆಗಿ ಪ್ರಸಕ್ತ ಸಾಲಿನಲ್ಲಿ ವಿಧಾನ ಸಭೆ ಅಧ್ಯಕ್ಷ ರಾಗಿ ಆಯ್ಕೆ ಆಗಿರುವ ಸ್ಪೀಕರ್ ಯುಟಿ ಖಾದರ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮವು ನಂದರಪಡ್ಪು ಎಸ್ ಕೆ ಹಾಲ್ ನಲ್ಲಿ ಜೂನ್ 11 ಭಾನುವಾರ ಸಂಜೆ 4 ಗಂಟೆಗೆ ಕೆ.ಎಂ.ಜೆ. ಮುಡಿಪು ಝೋನ್ ಅಧ್ಯಕ್ಷ ಹಾಜಿ ಅಲಿ ಕುಂಞಿ ಪಾರೆ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಝೈನುಲ್ ಉಲಮಾ ಮಾಣಿ ಉಸ್ತಾದ್,ಡಾ.ಅಬ್ದುಲ್ ರಶೀದ್ ಝೈನಿ,ಪಾಝಿಲ್ ರಝ್ವಿ ಕಾವಳಕಟ್ಟೆ, ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಶಾಫಿ ಸಅದಿ , ಎಸ್ ಕೆ ಖಾದರ್ ಹಾಜಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ಝೋನ್ ಅಧ್ಯಕ್ಷ ಆಲಿಕುಂಞಿ ಪಾರೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story