ಗೋಳ್ತಮಜಲು: ಜೂ.11ರಂದು ಉಚಿತ ವೈದ್ಯಕೀಯ ಶಿಬಿರ
ಬಂಟ್ವಾಳ, ಜೂ.10: ಕಲ್ಲಡ್ಕದ ಸ್ನೇಹ ಸಮ್ಮಿಲನ ಒಕ್ಕೂಟ ಹಾಗೂ ಲೈಫ್ ಲೈನ್ ಮಂಗಳೂರು ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವು ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಮುಂಭಾಗದ ಕಾರ್ ಪ್ಲಸ್ ಶೋ ರೂಂ ವಠಾರದಲ್ಲಿ ಜೂ.11ರಂದು ಆಯೋಜಿಸಲಾಗಿದೆ.
ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ಶಿಬಿರದಲ್ಲಿ ಮಂಗಳೂರಿನ ಖ್ಯಾತ ವೈದ್ಯರುಗಳಾದ ಡಾ.ಸುಹೈಬ್, ಡಾ.ಶ್ರೇಯಸ್, ಡಾ.ಅವಿನಾಶ್, ಡಾ. ಮುಹಮ್ಮದ್ ಮುಬಶ್ಶಿರ್, ಡಾ.ಆಯಿಶಾ ಸಫೂರಾ, ಡಾ.ಅಂಚಿತಾ, ಡಾ.ರಿಫಾತ್, ಡಾ.ಅಬ್ದುಲ್ ಬಾಸಿತ್ ಹಾಗೂ ಡಾ.ಸನಾ ಅಬೂಬಕರ್ ಭಾವಗಹಿಸಲಿದ್ದಾರೆ.
ಶಿಬಿರದಲ್ಲಿ ಚರ್ಮ ರೋಗ, ಹೆರಿಗೆ ಮತ್ತು ಸ್ತ್ರೀ ರೋಗ, ಮೂಳೆ, ಕಿವಿ ಮೂಗು ಗಂಟಲು (ಇ.ಎನ್.ಟಿ), ದಂತ, ಕ್ಯಾನ್ಸರ್, ನೇತ್ರ, ಹೊಟ್ಟೆ ಕರುಳು, ಹಾಗೂ ಮಕ್ಕಳ ತಜ್ಞರು ತಪಾಸಣೆ ನಡೆಸಲಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒಕ್ಕೂಟದ ಪ್ರಕಟನೆ ತಿಳಿಸಿದೆ.
Next Story