ಮಂಗಳೂರು: ಮನೆಯ ಮೇಲೆ ಉರುಳಿ ಬಿದ್ದ ಮರ; ಮೂವರಿಗೆ ಗಾಯ

ಮಂಗಳೂರು: ನಗರ ಹೊರವಲಯದ ಕಾವೂರು ಸಮೀಪದ ಬಿಜಿಎಸ್ ಪ್ರೌಢಶಾಲೆಯ ಬಳಿ ಮನೆಯೊಂದರ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮನೆಯ ಯಜಮಾನ ಸಹಿತ ಮೂವರು ಗಾಯಗೊಂಡ ಘಟನೆ ಇಂದು ನಡೆದಿದೆ.
ಮನೆಯ ಯಜಮಾನ ಸದಾನಂದ, ಅವರ ಪತ್ನಿ ರತ್ನಾ ಹಾಗೂ ಅವರ ಪುತ್ರಿ ಗಾಯಗೊಂಡಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಸಾಕಷ್ಟು ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ, ಮನಪಾ ಸದಸ್ಯೆ ಸುಮಂಗಲಾ ರಾವ್, ಮತ್ತಿತರ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದರು.
Next Story