ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಮೈಸೂರು ಪೊಲೀಸ್ ಆಯುಕ್ತರಿಗೆ ಸಿಎಂ ತರಾಟೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ್ದು, ಸ್ವಕ್ಷೇತ್ರ ವರುಣಾ ಸೇರಿದಂತೆ ಹಲವೆಡೆ ಪ್ರವಾಸ ಮಾಡಿದ್ದಾರೆ. ಈ ವೇಳೆ ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಪೊಲೀಸ್ ಆಯುಕ್ತರನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಮುಖ್ಯಮಂತ್ರಿಗಳು ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸುವ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ , ''ಏಕೆ ಝೀರೋ ಟ್ರಾಫಿಕ್ ಮಾಡಿದ್ದೀರಿ? ಝೀರೋ ಟ್ರಾಫಿಕ್ ಬೇಡ ಅಂತಾ ಹೇಳಿದ್ದೆ, ನಿಮಗೆ ಗೊತ್ತಿಲ್ವಾ?, ಇನ್ನು ಮುಂದೆ ಈ ರೀತಿ ಮಾಡಬೇಡಿ'' ಎಂದು ಪೊಲೀಸ್ ಆಯುಕ್ತ ತರಾಟೆಗೆ ತೆಗೆದುಕೊಂಡರು.
''ಮುಖ್ಯಮಂತ್ರಿಗಳಿಗೆ ನೀಡುವ ಝೀರೋ ಟ್ರಾಫಿಕ್ ಸೌಲಭ್ಯ ತನಗೆ ಬೇಡ'' ಎಂದು ಈ ಹಿಂದೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
Next Story