ಮಂಗಳೂರು: ಹತ್ಯೆಗೀಡಾದ ಜಲೀಲ್ ಕುಟುಂಬಕ್ಕೆ ಫ್ಲ್ಯಾಟ್ ಹಸ್ತಾಂತರ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೃಷ್ಣಾಪುರ ನಾಲ್ಕನೇ ಬ್ಲಾಕ್‌ನ ಅಬ್ದುಲ್ ಜಲೀಲ್‌ರ ಕುಟುಂಬಕ್ಕೆ ದಾನಿಗಳ ಹಾಗೂ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಹಾಯದಿಂದ ಖರೀದಿಸಲಾದ ಫ್ಲ್ಯಾಟನ್ನು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಸಿ. ಮೆಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ ಎಂ. ಮುಮ್ತಾಝ್ ಅಲಿ, ಹಾಜಿ ಎಸ್.ಎಂ. ರಶೀದ್, ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಬಿ. ಅಬೂಬಕ್ಕರ್, ಸಿ.ಎಂ. ಹನೀಫ್, ಸಿ.ಎಂ. ಮುಸ್ತಫಾ, ಎಂ.ಎ. ಅಶ್ರಫ್, ಎನ್.ಕೆ. ಅಬೂಬಕ್ಕರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ಕಾರ್ಯಕಾರಿ ಸಮಿತಿಯ ಸದಸ್ಯರೂ, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್ ಕಂದಕ್, ಹಾಜಿ ಶಂಸುದ್ದೀನ್ ಹಾಗೂ ಅಬ್ದುಲ್ ಜಲೀಲ್‌ರ ಕುಟುಂಬಸ್ಥರು ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
Next Story





