ಮೀನುಗಾರಿಕಾ ಕಾಲೇಜಿನಲ್ಲಿ ‘ಸಾಗರ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ’ ಕಾರ್ಯಾಗಾರ

ಮಂಗಳೂರು: ನಗರದ ಎಕ್ಕೂರಿನಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜಿನಲ್ಲಿ ವಿಶ್ವ ಪರಿಸರ ಮತ್ತು ವಿಶ್ವ ಸಾಗರಗಳ ದಿನಾಚರಣೆಯ ಪ್ರಯುಕ್ತ ‘ಸಾಗರ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ’ ಕಾರ್ಯಾಗಾರ ನಡೆಯಿತು.
ಗೋವಾ ಸರಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ.ಶಾಮಿಲಾ ದಾಸ್ ಮಿಲಾಗ್ರೀಸ್ ಮಾಂಟೇರಿಯೋ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೋವಾದ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ ಹಿರಿಯ ಪ್ರಧಾನ ವಿಜ್ಞಾನಿ ಡಾ.ಆರ್.ಎ. ಶ್ರೀಪಾದ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ.ಮಾತನಾಡಿದರು.
ಕಾಲೇಜಿನ ಡೀನ್ ಡಾ. ಹೆಚ್.ಎನ್. ಆಂಜನೇಯಪ್ಪಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಎಸ್.ಎಂ. ಶಿವಪ್ರಕಾಶ್ ಮೀನುಗಳ ವಲಸೆಗಳ ಮೇಲೆ ಸಾಗರಗಳ ಪ್ರವಾಹದ ಪರಿಣಾಮದ ಬಗ್ಗೆ ಉಪನ್ಯಾಸ ನೀಡಿದರು. ದಿವ್ಯಾ ಹೆಗ್ಗಡೆ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಸಮುದಾಯಗಳ ಪಾತ್ರದ ಬಗ್ಗೆ ಕಿರುಚಿತ್ರದ ಮೂಲಕ ಅರಿವು ಮೂಡಿಸಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹೇಶ್ ಕುಮಾರ್ ಯು. ‘ಕರಾವಳಿ ನಿಯಂತ್ರಣ ವಲಯ ಮತ್ತು ಪರಿಸರ ಸೂಕ್ಷ್ಮವಲಯ’ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಟಿ.ಎಸ್. ಅಣ್ಣಪ್ಪಸ್ವಾಮಿ, ಡಾ. ಪದ್ಮನಾಭ ಎ. ಉಪಸ್ಥಿತರಿದ್ದರು. ಜಲ ಪರಿಸರ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮಿಪತಿ ಎಂ.ಟಿ. ಸ್ವಾಗತಿಸಿದರು. ವಿಭಾಗದ ಪ್ರೊಫೆಸರ್ ಮತ್ತು ಸಂಘಟನಾ ಕಾರ್ಯದರ್ಶಿ ಡಾ.ಎ.ಟಿ. ರಾಮಚಂದ್ರ ನಾಯ್ಕ ವಂದಿಸಿದರು. ವಿದ್ಯಾರ್ಥಿನಿ ಭೂಲೇಶ್ವರಿ ಕಾರ್ಯಕ್ರಮ ನಿರೂಪಿಸಿದರು.