ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತಕ್ಕೆ ಬೃಹತ್ ಗುರಿ ನೀಡಿದ ಆಸೀಸ್
270 ರನ್‌ಗೆ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ

270 ರನ್‌ಗೆ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯಾ
ಲಂಡನ್: 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಗೆಲುವಿಗೆ ಆಸ್ಟ್ರೇಲಿಯಾ ಬೃಹತ್ ಗುರಿ ನೀಡಿದೆ. ಪಂದ್ಯದ 4ನೇ ದಿನವಾದ ಶನಿವಾರ 2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಕಾರಣ ಭಾರತಕ್ಕೆ ಗೆಲ್ಲಲು 444 ರನ್‌ಗಳ ದೊಡ್ಡ ಗುರಿ ಲಭಿಸಿತು.
ಪಂದ್ಯ ಇನ್ನೂ ಒಂದೂವರೆ ದಿನ ಬಾಕಿ ಇದ್ದು, ಭಾರತ ಸೋಲು ತಪ್ಪಿಸಲು ಅಥವಾ ಡ್ರಾ ಸಾಧಿಸಲು ಹೋರಾಡಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 469ಕ್ಕೆ ಆಲೌಟ್ ಆಗಿದ್ದರೆ, ತೀವ್ರ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ 296 ರನ್‌ಗೆ ಆಲೌಟಾಗಿ 173 ರನ್ ಮುನ್ನಡೆಯನ್ನು ಆಸೀಸ್‌ಗೆ ಬಿಟ್ಟುಕೊಟ್ಟಿತ್ತು.
Next Story