ಉಡುಪಿ: ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಉಡುಪಿ, ಜೂ.10:ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಬೀಜಾಡಿಯ ನಾಗೇಶ್ ಮತ್ತು ಶ್ಯಾಮಲಾ ದಂಪತಿ ಪುತ್ರಿ ಸಾನಿಕಾಳ ತೀರಾ ದುಸ್ಥಿತಿಯಲ್ಲಿದ್ದ ಮನೆಯನ್ನು ಪುನರ್ ನವೀಕರಿಸಿ ಗುರುವಾರ ಹಸ್ತಾಂತರಿಸಲಾಯಿತು.
ಸಂಸ್ಥೆಯ ಸದಸ್ಯರೂ, ಉದ್ಯಮಿ ಪ್ರಸಾದ್ ರಾವ್ ಪುತ್ತೂರು ಇವರು ಆನಂದ್ ಸಿ.ಕುಂದರ್ ಇವರ 75ರ ಸಂಭ್ರ ಮದ ಶುಭಾವಸರದಲ್ಲಿ ಕೃತಜ್ಞತಾ ಪೂರ್ವಕವಾಗಿ ರೂಪಿಸಿದ ಮನೆಯನ್ನು ಕೋಟ ಮಣೂರಿನ ಗೀತಾನಂದ ಫೌಂಡೇಶನ್‌ನ ಅಧ್ಯಕ್ಷರು, ದಾನಿಗಳೂ ಆನಂದ ಸಿ.ಕುಂದರ್ ಹಾಗೂ ಪತ್ನಿ ಗೀತಾ ಆನಂದ ಕುಂದರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಪ್ರಸಾದ್ ರಾವ್ ಇವರ ತಂದೆ ಶ್ರೀನಿವಾಸ ರಾವ್, ತಾಯಿ ಪ್ರೇಮಾ ರಾವ್ ಹಾಗೂ ಪತ್ನಿ ಪಲ್ಲವಿ ಪ್ರಸಾದ್, ಯು. ವಿಶ್ವನಾಥ ಶೆಣೈ, ಗೋಪಾಲ್ ಕುಂಭಾಶಿ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ.ಭಟ್, ಭುವನ ಪ್ರಸಾದ್ ಹೆಗ್ಡೆ, ರಮೇಶ್ ರಾವ್, ವಿಜಯ ಕುಮಾರ್ ಮುದ್ರಾಡಿ, ಕೃಷ್ಣಮೂರ್ತಿ ಭಟ್, ವಿದ್ಯಾಪ್ರಸಾದ್ ಕೆ., ಅಜಿತ್ ಕುಮಾರ್, ಕಿಶೋರ್ ಸಿ. ಉದ್ಯಾವರ, ಗಣೇಶ್ ಬ್ರಹ್ಮಾವರ, ನಾಗರಾಜ ಹೆಗಡೆ, ಸರಕಾರಿ ಪ್ರೌಢ ಶಾಲೆ ಬೀಜಾಡಿಯ ಮುಖ್ಯೋಪಾಧ್ಯಾಯಿನಿ ವಿನೋದ ಎಂ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೀಜಾಡಿಯ ಹಿರಿಯ ಸಾಮಾಜಿಕ ಧುರೀಣ ಶೇಷಗಿರಿ ಗೋಟ ಇವರನ್ನು ಸಂಸ್ಥೆಯ ವತಿುಂದ ಶಾಲು ಹೊದಿಸಿ ಗೌರಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್, ಹೆಚ್.ಎನ್.ಶೃಂಗೇಶ್ವರ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಇದು ದಾನಿಗಳ ನೆರವಿನಿಂದ ಯಕ್ಷಗಾನ ಕಲಾರಂಗ ನಿರ್ಮಿಸಿದ 38ನೇಯ ಮನೆಯಾಗಿದೆ. ಇನ್ನೂ 10 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ.