ಬಜರಂಗದಳ, ಗೋಹತ್ಯೆ ನಿಷೇಧ ಚರ್ಚೆ ಅನವಶ್ಯಕ: ಸಚಿವ ಎಚ್.ಕೆ.ಪಾಟೀಲ್

ಹುಬ್ಬಳ್ಳಿ: ಪ್ರವಾಸೋದ್ಯಮ ಬೆಳಸಬೇಕಾಗಿದೆ. ಅದನ್ನು ಬೆಳಸುವುದು ನಮ್ಮ ಕರ್ತವ್ಯ. ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಬೆಳೆಯಬೇಕಿದೆ. ಉತ್ತರ ಕರ್ನಾಟಕದ ಯಲ್ಲಮನಗುಡ್ಡ, ಬನಶಂಕರಿ, ಹುಲಗೆಮ್ಮ ಅತ್ಯಂತ ದೊಡ್ಡ ಕ್ಷೇತ್ರ. ಇವುಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ, ನಮ್ಮ ಸರ್ಕಾರ ಅದಕ್ಕೆ ಒತ್ತು ಕೊಡತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಜರಂಗದಳ, ಗೋಹತ್ಯೆ ನಿಷೇಧ ಚರ್ಚೆ ಅನವಶ್ಯಕ. ಇದಕ್ಕೆಲ್ಲ ಮಹತ್ವ ಇಲ್ಲ. ಸರ್ಕಾರದ ಮುಂದೆ ಯಾವ ಪ್ರಸ್ತಾವನೆ ಇಲ್ಲ ಎಂದು ಅವರು ಹೇಳಿದರು.
ಎಪಿಎಂಸಿ ಮಂತ್ರಿಗಳು ನಮ್ಮ ಜೊತೆ ಮಾತಾಡಿದ್ದಾರೆ. ಎಪಿಎಂಸಿ ಕಾನೂನು ಮತ್ತೆ ಅನುಷ್ಠಾನ ಜಾರಿ ಮಾಡಬೇಕು ಎನ್ನುವುದು ಸಚಿವರ ಇಚ್ಛೆ. ಇನ್ನೊಂದು ವಾರದಲ್ಲಿ ಧೃಡವಾದ ಹೆಜ್ಜೆ ಇಡುತ್ತೇವೆ ಎಂದರು.
ಬಿಜೆಪಿ ಸರ್ಕಾರ ಯಾವ ಕಡೆ ಗಮನ ಕೊಟ್ಟಿಲ್ಲ ಎನ್ನುವುದು ಪರಿಶೀಲನೆ ಮಾಡಬೇಕಿದೆ. ನಾವು ಸಮಾಜ ಸುಧಾರಣೆ ಆಗುವ ವಿಶೇಷ ಬಿಲ್ ಗಳನ್ನು ತರಲಿದ್ದೇವೆ ಹೊರತು ಜನರಿಗೆ ಬೇಸರ ಮಾಡುವ ಆಡಳಿತ ಮಾಡುವುದಿಲ್ಲ ಎಂದು ಭರವಸೆ ನೀಡಿದರು.