ಗಾಂಜಾ ಸೇವನೆ: ಐವರು ವಶಕ್ಕೆ

ಕುಂದಾಪುರ, ಜೂ.10: ಗಾಂಜಾ ಸೇವನೆಗೆ ಸಂಬಂಧಿಸಿ ಜೂ.9ರಂದು ಕೋಟೇಶ್ವರ ಜಂಕ್ಷನ್ ಬಳಿ ಅಭಿಷೇಕ್ ಎಂ.ಪಿ. (20), ವರ್ಗೀಸ್ ಜೋನ್ (22), ಅಶ್ವಿನ್ ಮಣಿಕಂಠನ್ (21) ಎಂಬವರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಜೂ.2ರಂದು ಪೆರಂಪಳ್ಳಿ ಎಂಬಲ್ಲಿ ರಾಹುಲ್ ಕುಂದರ್ (24) ಹಾಗೂ ಸಮಿತ್ ಸುಜಯ್(19) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





