'ಶಕ್ತಿ' ಯೋಜನೆಯ ಅನುಷ್ಠಾನ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರತೀಕ: ದಿನೇಶ್ ಗುಂಡೂರಾವ್

ಬೆಂಗಳೂರು: ನಾನು ಉಸ್ತುವಾರಿಯಾಗಿರುವ ದಕ್ಷಿಣ ಕನ್ನಡದ ಬಿಜೈನ KSRTC ನಿಗಮದಲ್ಲಿ ನಾನು ಈ ಯೋಜನೆಗೆ ಇಂದು ಚಾಲನೆ ನೀಡಲಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರದ 5ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಇಂದಿನಿಂದ ಅನುಷ್ಠಾನವಾಗಲಿದೆ. ನಾವು ಅಧಿಕಾರಕ್ಕೆ ಬಂದ 1ತಿಂಗಳ ಒಳಗೇ ಈ ಯೋಜನೆ ಅನುಷ್ಟಾನವಾಗುತ್ತಿರುವುದು ಸಾರ್ಥಕತೆ ಮೂಡಿಸಿದೆ ಎಂದು ಹೇಳಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಬಗ್ಗೆ BJPಯವರು ಹಾಗೂ ಕೆಲ ಪಟ್ಟಭಧ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸಿದ್ದರು. ಈ ಯೋಜನೆಗಳು ಅನುಷ್ಟಾನವಾಗುವುದೇ ಇಲ್ಲ ಎಂದು ಜನರಲ್ಲಿ ಗೊಂದಲ ಮೂಡಿಸಿದ್ದರು. ಆದರೆ ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಇಂದಿನಿಂದ ಅನುಷ್ಟಾನವಾಗುತ್ತಿರುವ 'ಶಕ್ತಿ' ಯೋಜನೆಯೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಅನುಷ್ಟಾನವಾಗುತ್ತಿರುವುದು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರತೀಕ. ಇದೇ ರೀತಿ 'ಅನ್ನಭಾಗ್ಯ','ಗೃಹಲಕ್ಷ್ಮಿ', 'ಗೃಹಜ್ಯೋತಿ' ಮತ್ತು 'ಯುವನಿಧಿ' ಯೋಜನೆಗಳು ಕೂಡ ಜಾರಿಯಾಗಲಿವೆ. ಈ ಬಗ್ಗೆ ರಾಜಕೀಯ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಲಿ, ಈ ಯೋಜನೆಗಳು ಜನರಿಗೆ ತಲುಪುವುದು ಖಚಿತ ಎಂದು ಟ್ವೀಟ್ ಮಾಡಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 11, 2023
ನಮ್ಮ ಸರ್ಕಾರದ 5ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಇಂದಿನಿಂದ ಅನುಷ್ಟಾನವಾಗಲಿದೆ.
ನಾವು ಅಧಿಕಾರಕ್ಕೆ ಬಂದ 1ತಿಂಗಳ ಒಳಗೇ ಈ ಯೋಜನೆ ಅನುಷ್ಟಾನವಾಗುತ್ತಿರುವುದು ಸಾರ್ಥಕತೆ ಮೂಡಿಸಿದೆ.
ನಾನು ಉಸ್ತುವಾರಿಯಾಗಿರುವ ದ.ಕನ್ನಡದ ಬಿಜೈನ KSRTC ನಿಗಮದಲ್ಲಿ ನಾನು ಈ ಯೋಜನೆಗೆ ಇಂದು ಚಾಲನೆ ನೀಡಲಿದ್ದೇನೆ.







