ಗೋಳ್ತಮಜಲು: ಕಲ್ಲಡ್ಕ ಸ್ನೇಹ ಸಮ್ಮಿಲನ ಒಕ್ಕೂಟ, ಲೈಫ್ ಲೈನ್ ಮಂಗಳೂರು ವತಿಯಿಂದ ಉಚಿತ ವೈದ್ಯಕೀಯ ಶಿಬಿರ

ಬಂಟ್ವಾಳ : ಸ್ನೇಹ ಸಮ್ಮಿಲನ ಒಕ್ಕೂಟ ಕಲ್ಲಡ್ಕ ಹಾಗೂ ಲೈಫ್ ಲೈನ್ ಮಂಗಳೂರು ಇದರ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವು ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಮುಂಬಾಗದ ಕಾರ್ ಪ್ಲಸ್ ಶೋ ರೂಂ ವಠಾರದಲ್ಲಿ ಭಾನುವಾರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ ಮಾತನಾಡಿ ಯುವ ಜನತೆ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಡಾ. ರವಿಕಿರಣ್ ಮಾತನಾಡಿ ಜೀವನ ಶೈಲಿ ಮತ್ತು ಆಹಾರ ಪದ್ದತಿಯಲ್ಲಿ ನಿಯಂತ್ರಣ ಕಾಯ್ದುಕೊಂಡರೆ ಅನಾರೋಗ್ಯದಿಂದ ಮುಕ್ತರಾಗಿ ಬದುಕಬಹುದು ಎಂದು ಅಭಿಪ್ರಾಯಪಟ್ಟರು.
ಗೋಳ್ತಮಜಲು ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಕೆ.ಸಿ.ರೋಡ್ ಜುಮಾ ಮಸೀದಿ ಖತೀಬ್ ಜಿ.ಎಂ.ಯಹ್ಯಾ ದಾರಿಮಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕಲ್ಲಡ್ಕ ಪರಿಸರದ ಯುವ ವೈದ್ಯರುಗಳಾದ ಡಾ. ಝಮೀರ್, ಡಾ. ಸಫ್ರೀನಾ, ಡಾ. ಶಮೀಮಾ, ಡಾ. ಹಾಜಿರಾ ರಿಲ್ಹಾ, ಡಾ. ಖತೀಜಾ ಸುಹೈಮಾ, ಡಾ. ಫಾತಿಮತ್ ರಿಶಾನಾ, ಡಾ. ಹನ್ನಾ ಇವರನ್ನು ಅಭಿನಂದಿಸಲಾಯಿತು.
ಡಾ. ನೂರ್ ಮುಹಮ್ಮದ್ ಡಾ. ಅವಿನಾಶ್, ಕೆ.ಎನ್. ನವಾಝ್, ಜವಾಝ್ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಮಂಗಳೂರಿನ ವೈದ್ಯರುಗಳಾದ ಡಾ. ಶುಹೈಬ್, ಡಾ. ಶ್ರೇಯಸ್, ಡಾ. ಅವಿನಾಶ್, ಡಾ. ಮುಹಮ್ಮದ್ ಮುಬಶ್ಶಿರ್, ಡಾ. ಆಯಿಶಾ ಸಫೂರಾ, ಡಾ. ಅಂಚಿತಾ, ಡಾ. ರಿಫಾತ್, ಡಾ. ಅಬ್ದುಲ್ ಬಾಸಿತ್, ಡಾ. ನೂರಾ ಎ.ಎಸ್, ಹಾಗೂ ಡಾ. ಸನಾ ಅಬೂಬಕರ್ ವಿವಿಧ ರೋಗಿಗಳ ತಪಾಸಣೆ ನಡೆಸಿದರು.
ಮನ್ಸೂರ್ ಸ್ವಾಗತಿಸಿ, ಫಿರೋಝ್ ಪ್ರಸ್ತಾವನೆಗೈದರು. ಇಮ್ತಿಯಾಜ್ ಗೋಳ್ತಮಜಲು ವಂದಿಸಿ, ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.