ಬಸ್ ನಲ್ಲಿ ಪ್ರಯಾಣಿಸಿ ಶಕ್ತಿ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ

ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿ, ಸಾರಿಗೆ ಸಚಿವರು ವಿಧಾನ ಸೌಧದ ಮುಂಭಾಗದಿಂದ ಶಕ್ತಿ ಯೋಜನೆಗೆ ವಿದ್ಯುಕ್ತ ಚಾಲನೆಯನ್ನು ನೀಡಿದ್ದಾರೆ.
ಗಣ್ಯರನ್ನು ಹೊತ್ತೊಯ್ಯುವ ಬಸ್ ವಿಧಾನ ಸೌಧದ ಜಿಪಿಒ ವೃತ್ತ, ರಾಜಭವನ ಮಾರ್ಗವಾಗಿ ಬಸವೇಶ್ವರ ವೃತ್ತ, ಪ್ಯಾಲೆಸ್ ರಸ್ತೆಯ ಮೂಲಕ ಮೈಸುರು ಬ್ಯಾಂಕ್, ಧನ್ವಂತರಿ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾಗಿತು.
ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ನಾಲ್ಕೂ ಸಂಸ್ಥೆಗಳು ರಾಜ್ಯದ ಮಹಿಳಾ ಫಲಾನುಭವಿಗಳಿಗೆ ಈ ಯೋಜನೆಯನ್ನು ಮೀಸಲಿಟ್ಟು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ.
Next Story





