Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. NEP ರದ್ದುಮಾಡಲು 6 ಸಕಾರಣಗಳನ್ನು ನೀಡಿ...

NEP ರದ್ದುಮಾಡಲು 6 ಸಕಾರಣಗಳನ್ನು ನೀಡಿ ಮುಖ್ಯಮಂತ್ರಿಗೆ ನಿರಂಜನಾರಾಧ್ಯ ವಿ.ಪಿ ಬಹಿರಂಗ ಪತ್ರ

11 Jun 2023 4:46 PM IST
share
NEP ರದ್ದುಮಾಡಲು 6 ಸಕಾರಣಗಳನ್ನು ನೀಡಿ ಮುಖ್ಯಮಂತ್ರಿಗೆ ನಿರಂಜನಾರಾಧ್ಯ ವಿ.ಪಿ ಬಹಿರಂಗ ಪತ್ರ

ಬೆಂಗಳೂರು: 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಮಾಡಲು 6 ಸಕಾರಣಗಳನ್ನು ನೀಡಿ 'ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ' ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದೆ. 

'ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ ಅವರ ಬಹಿರಂಗ ಪತ್ರದ ಸಾರಾಂಶ ಇಲ್ಲಿದೆ:

ವಿಷಯ : 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಮಾಡಲು 6 ಸಕಾರಣಗಳು 

ತಮ್ಮ ನೇತೃತ್ವದ ಆಡಳಿತರೂಢ ಕಾಂಗ್ರೆಸ್‌ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ’ಅವೈಜ್ಞಾನಿಕವಾದ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನʼ ಮಾಡುವುದಾಗಿ ಘೋಷಿಸಿ ಬಹುಮತದ ಮೂಲಕ  ಅಧಿಕಾರಕ್ಕೆ ಬಂದಿದೆ.  ತಮ್ಮ ಪಕ್ಷ ಪರಿಭಾವಿಸಿರುವಂತೆ  ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಅವೈಜ್ಞಾನಿಕ ಮಾತ್ರವಲ್ಲ, ಈ ನೀತಿಯು ಅಸಂವಿಧಾನಿಕ , ಅಪ್ರಜಾಸತ್ತಾತ್ಮಕ, ಅಪಾರದರ್ಶಕ ಮತ್ತು ಒಂದು ಗೌಪ್ಯ ರಾಜಕೀಯ ಅಜೆಂಡಾವನ್ನು ಕಾರ್ಯಗತಗೊಳಿಸಲು ರೂಪಿಸಿದ ಕಾರ್ಯಸೂಚಿ. ಪ್ರಜಾಸತ್ತಾತ್ಮಕ ಚರ್ಚೆ ಮತ್ತು ಪ್ರಜಾಸತ್ತಾತ್ಮಕ ಸಂಸದೀಯ ಶಾಸನಬದ್ಧ ಮಾರ್ಗವನ್ನು  ಬದಿಗೊತ್ತಿ ವಾಮ ಮಾರ್ಗದಲ್ಲಿ ಜಾರಿಗೊಳಿಸಿದ ಅಪಾಯಕಾರಿ ನೀತಿ. 
ಹಿಂದಿನ ಸರ್ಕಾರ  ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ  ಹಾಳು ಮಾಡಿದ್ದಲ್ಲದೆ, ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಎಳೆ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡಿತ್ತು.ಅಸಂವಿಧಾನಿಕವಾಗಿ ಮತ್ತು ಅಪಾರದರ್ಶಕತೆಯಿಂದ ನಡೆದ ಈ ಕೆಲಸದಲ್ಲಿ  ಕಣ್ಣಿಗೆ ಕಾಣಬಹುದಾದ ಹಾಗು ಕಣ್ಣಿಗೆ ಕಾಣದ ಹಲವು ಬದಲಾವಣೆಗಳಾಗಿವೆ. ಒಂದು ರೀತಿಯಲ್ಲಿ ಶಿಕ್ಷಣದ ಪ್ರಕ್ರಿಯೆಯನ್ನೇ ಸರ್ವನಾಶ ಮಾಡಿದ್ದಾರೆ. 

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಹೊಸ ಸರ್ಕಾರ ಶಿಕ್ಷಣವನ್ನು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಸಾಧನವೆಂಬ ವಿಶಾಲ ದೃಷ್ಟಿಯಲ್ಲಿ ಪರಿಭಾವಿಸಬೇಕಾಗುತ್ತದೆ. ಸಂವಿಧಾನ ಹಾಗು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅನ್ವಯ ಶಿಕ್ಷಣ  ಒದಗಿಸುವುದು ಒಂದು ಸರಕಾರದ ಮೊದಲ ಆದ್ಯತೆ ವಿಷಯವಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಮಾಡಲು ಅತ್ಯಂತ ಪ್ರಮುಖ ಹಾಗು ಸೈದ್ಧಾಂತಿಕ ಸಕಾರಣಗಳನ್ನು ಮಾತ್ರ ತಮ್ಮ ಮಾಹಿತಿಗಾಗಿ ತರಬಯಸುತ್ತೇನೆ. ಅವು ಈ ಕೆಳಗಿನಂತಿವೆ: 

ಕಾರಣ-1: ಶಿಕ್ಷಣದ ನೀತಿಯನ್ನು ಪರಾಮರ್ಶಿಸುವಾಗ ಅಲ್ಲಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವೈರುಧ್ಯ ಮತ್ತು ಪ್ರಕ್ರಿಯೆಗಳ ಸಂದರ್ಭದಲ್ಲಿ ನೀತಿ- ನಿರ್ಧಾರಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಅರ್ಥೈಸಬೇಕಾಗುತ್ತದೆ.  ಒಂದೆಡೆ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಮತ್ತೊಂದೆಡೆ ಧಾರ್ಮಿಕ ಹಾಗು ಕೋಮುವಾದಿ ನೆಲೆಯ  ಹಿಂದುತ್ವ ಪ್ರಾಬಲ್ಯದ ನೀತಿಗಳು ಮತ್ತು ಆಚರಣೆಗಳು ಸಂವಿಧಾನದ  ಹಾಗು ಆಧುನಿಕ ವೈಜ್ಞಾನಿಕ ಶಿಕ್ಷಣದ  ಮೂಲ ಆಶಯಗಳಿಗೆ ಅಪಾಯ ತಂದೊಡ್ಡಿವೆ . ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದೆ, ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಭಾರತದ ಪ್ರಜಾಪ್ರಭುತ್ವ ಸರ್ವಾಧಿಕಾರದತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿ, ಭಾರತದ ಒಕ್ಕೂಟ ವ್ಯವಸ್ಥೆ ಹಾಗು ಸಂವಿಧಾನವನ್ನು ಗೌಣಗೊಳಿಸುವ NEPಯನ್ನು ರದ್ದುಮಾಡಬೇಕಿದೆ

ಕಾರಣ -2: ಕೇಂದ್ರ ಸರ್ಕಾರವು ನಮ್ಮ ಸಂವಿಧಾನದ ಮೂಲ ಆಶಯವಾದ ಒಕ್ಕೂಟ ಗಣತಂತ್ರ ಸಂರಚನೆಯನ್ನು ನಾಶಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಸಾಧನವ್ನಾಗಿ ಬಳಸುತ್ತಿದೆ. ಅಸಂವಿಧಾನಿಕ, ಅಪ್ರಜಾಪ್ರಭುತ್ವ ಅಪಾರದರ್ಶಕ, ಅವೈಜ್ಞಾನಿಕ, ಕಾಲಾತೀತ ಮತ್ತು  ಐತಿಹಾಸಿಕವಲ್ಲದ ವಿಧಾನ ಹಾಗು ಮಿತಿ ಮೀರಿದ ಕೇಂದ್ರೀಕರಣದ ಮೂಲಕ ಈಗಿನ ವೈಜ್ಞಾನಿಕ ಹಾಗು ವಿಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಶಿಥಿಲಗೊಳಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಈ ನೀತಿಯು ಶಿಕ್ಷಣದಲ್ಲಿ ಖಾಸಗೀಕರಣ, ವ್ಯಾಪರೀಕರಣ ಹಾಗು ಹೊಸ ಬಗೆಯ ಕಾರ್ಪೋರೇಟರೀಕರಣವನ್ನು ಉತ್ತೇಜಿಸುವ ಮೂಲಕ ಶಿಕ್ಷಣವನ್ನು ಒಂದು ಮಾರಾಟದ ಸರಕನ್ನಾಗಿಸುತ್ತದೆ. 

ಕಾರಣ-3: ಭಾರತದ ಸಂವಿಧಾನವು ಒಪ್ಪಿ ಒಳಮಾಡಿಕೊಂಡಿರುವ ಮೌಲ್ಯಗಳಾದ  ಬಹುತ್ವ , ಬಹು-ಸಂಸ್ಕೃತಿ, ಬಹುಭಾಷೆ, ಬಹುಧರ್ಮ, ಭಾತೃತ್ವ, ಸಾಮರಸ್ಯ, ಸಹಬಾಳ್ವೆ ಸಮಾನತೆ, ಸಾಮಾಜಿಕ ನ್ಯಾಯದ ಮೂಲಕ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ  ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿಸುವ ದಿಕ್ಕಿನಲ್ಲಿ ಶಿಕ್ಷಣವನ್ನು ಒಂದು ಸಾಧನವನ್ನಾಗಿ ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಸಂವಿಧಾನ ಆಧಾರಿತ ರಾಷ್ಟ್ರೀಯತೆ, ದೇಶಪ್ರೇಮ ಮತ್ತು ದೇಶಭಕ್ತಿ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಬೆಳೆಸಬೇಕಿದೆ. ಆದರೆ, ಸಂವಿಧಾನ ಈ ಮೌಲ್ಯಗಳಿಗೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರದ ರಾಶಿನೀಯು   ಧಾರ್ಮಿಕ ಮತ್ತು ಕೋಮುವಾದಿ ರಾಜಕೀಯದ ಕಾರ್ಯಸೂಚಿಯನ್ನು  ಶಿಕ್ಷಣ ನೀತಿಯಲ್ಲಿ ಅಳವಡಿಸುವ ಮೂಲಕ  ಭಾರತವನ್ನು  "ಹಿಂದೂ ರಾಷ್ಟ್ರ"ವನ್ನಾಗಿಸುವ  ಗೌಪ್ಯ ಅಜೆಂಡಾವನ್ನು ತನ್ನ ಒಡಲಾಳದಲ್ಲಿರಿಸಿಕೊಂಡಿದೆ.  

ಕಾರಣ-4: ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಭಾರತೀಯ ಜ್ಞಾನ ವ್ಯವಸ್ಥೆಯೆಂದರೆ ಪ್ರಾಚೀನ ಮತ್ತು ಸನಾತನ ಭಾರತೀಯ ಜ್ಞಾನ ಮತ್ತು ಚಿಂತನೆಯ ಶ್ರೀಮಂತ ಪರಂಪರೆ . ಇದೇ ಈ ನೀತಿಯ ಮಾರ್ಗದರ್ಶಿ ಬೆಳಕು. (The rich heritage of ancient and eternal Indian knowledge and thought has been a guiding light for this Policy-page 4 para 2). ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿಪಾದಿಸುತ್ತಿರುವ ಭಾರತೀಯ ಜ್ಞಾನ ವ್ಯವಸ್ಥೆಯು ವಸಾಹತುಶಾಹಿ  ಭಾರತೀಯ ಇತಿಹಾಸಕಾರರು ಪ್ರಚಾರ ಮಾಡಿದ 'ಪ್ರಾಚೀನ ಸುವರ್ಣ ಯುಗ'ದ ಕಲ್ಪನೆಯನ್ನು ಯಾವುದೇ ವಿಮರ್ಶೆಯಿಲ್ಲದೆ ಕುರುಡಾಗಿ  ಅನುಕರಿಸುತ್ತದೆ. ಆ ಮೂಲಕ ಪ್ರಾಚೀನ ಭಾರತದಲ್ಲಿದ್ದ ಆಳವಾದ ಜಾತಿ ವ್ಯವಸ್ಥೆ,  ಶೋಷಣೆ, ಲಿಂಗ ತಾರತಮ್ಯವನ್ನು ಮತ್ತು ವರ್ಣಾಶ್ರಮ ಶ್ರೇಣೀಕೃತ ವ್ಯವಸ್ಥೆಯನ್ನು ಅದು ನಿರ್ಲಕ್ಷಿಸಿ ಮರೆಮಾಚುತ್ತದೆ. 

ಕಾರಣ-5: ರಾಶಿನೀಯು ಪ್ರಸ್ತಾಪಿಸುವ ಭಾರತೀಯ ಜ್ಞಾನ ವ್ಯವಸ್ಥೆಯು ತಿಳಿವರಿಮೆ (Epistemology) ಮತ್ತು ಶಿಕ್ಷಣಶಾಸ್ತ್ರಕ್ಕೆ  (Pedogogy) ಸಂಬಂಧಿಸದಂತೆ  ಬ್ರಾಹ್ಮಣ್ಯೇತರ  ಕೊಡುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಲೋಕಾಯುತ ಹಾಗು ಚಾರ್ವಾಕರ ಚಿಂತನೆಗಳಿಗೆ ಇಲ್ಲಿ ಅವಕಾಶವಿಲ್ಲ ಜೊತೆಗೆ, ಮಧ್ಯಕಾಲೀನ ಭಾರತದಲ್ಲಿ ಇಸ್ಲಾಮಿಕ್ ಸಂಪ್ರದಾಯಗಳು ಹಿಂದೂ ಸಂಪ್ರದಾಯಗಳೊಂದಿಗೆ ಸಂವಹನ ನಡೆಸಿದ ಮೂಲಕ ಹುಟ್ಟಿದ  ಭಕ್ತಿ ಹಾಗು ಸೂಫಿವಾದ  ಕಟ್ಟಿಕೊಟ್ಟ  ಹೊಸ ಬಗೆಯ ಆಡಳಿತ, ವಾಣಿಜ್ಯ, ವಾಸ್ತುಶಿಲ್ಪ, ಎಂಜಿನಿಯರಿಂಗ್, ಸಾಹಿತ್ಯ, ಸಂಗೀತ ಮತ್ತು ಕಲೆಗಳಂತಹ ಜ್ಞಾನದ ಹಲವಾರು ಕ್ಷೇತ್ರಗಳಲ್ಲಿ ಹೊಸ ಚಲನಶೀಲತೆಯನ್ನು ತುಂಬಿದ ಮಧ್ಯಕಾಲೀನ ಯುಗದ ಪ್ರಸ್ತುತತೆಯನ್ನು ಇದು ಸಂಪೂರ್ಣವಾಗಿ ನಿರಾಕರಿಸುತ್ತದೆ. ಜೊತೆಗೆ ಬುದ್ಧ, ಮಹಾವೀರ, ಬಸವ ,ಜ್ಯೋತಿಬಾ ಹಾಗು ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್, ಪೆರಿಯಾರ್, ನಾರಾಯಣ ಗುರು ಮುಂತಾದವರ ಬೌದ್ಧಿಕ ಚಿಂತನೆ ಹಾಗು ಸಾಮಾಜಿಕ ಪರಿವರ್ತನೆಯ ವಿಚಾರಧಾರೆಗಳನ್ನು ತನ್ನ ಜ್ಞಾನ ವಲಯದ ಚೌಕಟ್ಟಿನಿಂದ ಹೊರಗಿಡುತ್ತದೆ. ಅಂತೆಯೇ, ಮಧ್ಯ ಮತ್ತು ಪೂರ್ವ ಭಾರತದ ಬುಡಕಟ್ಟು ಜನಾಂಗದವರು ಮತ್ತು ಈಶಾನ್ಯ ರಾಜ್ಯಗಳು ಕೃಷಿ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ನೀಡಿದ ಕೊಡುಗೆಗಳನ್ನು ಭಾರತೀಯ ಪರಂಪರೆ ಅಥವಾ ಜ್ಞಾನ ವ್ಯವಸ್ಥೆಯ ಭಾಗವೆಂದು ಗುರುತಿಸುವುದಿಲ್ಲ. ಕೇವಲ, ಸನಾತನ ಭಾರತೀಯ ಪರಂಪರೆಯ ಆಧಾರದಲ್ಲಿ  ಪೂರ್ವಾಗ್ರಹ ಪೀಡಿತ ಗ್ರಹಿಕೆಯು  ಕೇವಲ ಹಿಂದುತ್ವ  ಆಧಾರಿತ ಬ್ರಾಹ್ಮಣೀಯ, ಮನುವಾದಿ ಮತ್ತು ಸಂಸ್ಕೃತ ಆಧಾರಿತ  ಸಂಸ್ಕೃತಿಯನ್ನೇ  ಭಾರತೀಯ ಉಪಖಂಡದ ಸಂಸ್ಕೃತಿಯಾಗಿ ಬಿಂಬಿಸಲು ಶಿಕ್ಷಣವನ್ನು ಪುನರ್ ವ್ಯಾಖ್ಯಾನಿಸುವ ಅಪಾಯವನ್ನು ಹೊಂದಿದೆ.

ಕಾರಣ-6: ಈ ಎಲ್ಲಾ ಸಂಕುಚಿತ ಹಾಗು  ಪೂರ್ವಾಗ್ರಹ ಪೀಡಿತ ಹುಸಿ ಜ್ಞಾನ ವ್ಯವಸ್ಥೆಯ ನೆಲೆಯಲ್ಲಿ ರೂಪಿತವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020,   ಈ ಹಿಂದಿನ ಎಲ್ಲಾ ನೀತಿಗಳನ್ನು ರಚನಾತ್ಮಕವಾಗಿ ಪರಾಮರ್ಶಿಸಿ,  ಈವರೆಗಿನ  ಸಾಧನೆಗಳೇನು- ಸವಾಲುಗಳೇನು ಎಂಬುದನ್ನು ಶೈಕ್ಷಣಿಕ ನೆಲೆಯಲ್ಲಿ     ವಸ್ತುನಿಷ್ಠವಾಗಿ ಚರ್ಚಿಸಿ- ವಿಮರ್ಶಿಸಿ  ಶಿಕ್ಷಣ ನೀತಿಯನ್ನು ಪರಿಷ್ಕರಿಸಲು/ ರೂಪಿಸಲು  ಪೂರ್ಣವಾಗಿ ವಿಫಲವಾಗಿದೆ. ಬದಲಿಗೆ, ಪ್ರತೀಕಾರದ ನೆಲೆಯಲ್ಲಿ ಹಿಂದಿನ ಎಲ್ಲಾ ಸಾಧನೆಗಳನ್ನು ಗೌಣಗೊಳಿಸುವ ಮೂಲಕ 1968, 1979 (ಕರಡು) , 1986 , 1992 (ಪರಿಷ್ಕೃತ) ನೀತಿಗಳನ್ನು ಅಪಮೌಲ್ಯಗೊಳಿಸಿದೆ.  ಈ ಮೂಲಕ ಮೇಲಿನ ನೀತಿಗಳು ಪ್ರತಿಪಾದಿಸಿದ್ದ ಸ್ವಾತಂತ್ರ್ಯ ಚಳುವಳಿಯ ಮುಂಗಾಣ್ಕೆ , ಶಿಕ್ಷಣ ಆಯೋಗದ (ಕೊಥಾರಿ ಆಯೋಗದ) ಶಿಫಾರಸ್ಸುಗಳು ಮತ್ತು ಪ್ರಮುಖವಾಗಿ 21 ನೇ ಶತಮಾನದಲ್ಲಿ ಮಕ್ಕಳಿಗೆ ಮೂಲಭೂತ ಹಕ್ಕಾಗಿ ದೊರೆತ  ಶಿಕ್ಷಣ ಹಕ್ಕು ಕಾಯಿದೆಯ ಆಶಯಗಳನ್ನು ಮಣ್ಣುಪಾಲು ಮಾಡಿದೆ. 

ಈ ಅಂಶಗಳ  ಹಿನ್ನೆಲೆಯಲ್ಲಿ, ಮೇಲೆ ಪ್ರಸ್ತಾಪಿಸಿದ ಎಲ್ಲಾ ಜ್ಞಾನ ಪರಂಪರೆಗಳ ಬಗ್ಗೆ ವಸ್ತುನಿಷ್ಠವಾದ ಮತ್ತು ಸಂಶೋಧನಾಧಾರಿತ ಸಾಕ್ಷಾಧಾರಗಳ ಮೂಲಕ ಆಧುನಿಕ ವೈಜ್ಞಾನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ತಾವು,  ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ  ’ಅವೈಜ್ಞಾನಿಕವಾದ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನʼ ಮಾಡುವುದಾಗಿ ಘೋಷಿಸಿದ್ದಿರಿ.  
ಪ್ರಣಾಳಿಕೆ  ಒಂದು ತಾತ್ವಿಕ  ಒಡಂಬಡಿಕೆ. ಚುನಾವಣಾ ಸಂದರ್ಭದಲ್ಲಿ ಮತದಾರರು ಮತ್ತು ಚುನಾಯಿತರ ನಡುವಿನ ಮಹತ್ವದ ಒಪ್ಪಂದ. ಭಾರತದ ಸಂವಿಧಾನದ ಪ್ರಕಾರ, ಸರ್ಕಾರವನ್ನು ಚುನಾಯಿಸುವ ಅಂತಿಮ ಸಾರ್ವಭೌಮತ್ವವನ್ನು ಭಾರತದ ಮತದಾರರಿಗೆ  ನೀಡಲಾಗಿದೆ. ಅವರು ತಮ್ಮ ಮತದಾನದ ಮೂಲಕ ಸರ್ಕಾರಕ್ಕೆ ನೀತಿ ಹಾಗು  ಕಾನೂನುಗಳನ್ನು ರೂಪಿಸಲು  ಸಾರ್ವಭೌಮ ಅಧಿಕಾರವನ್ನು ನೀಡಿರುತ್ತಾರೆ. ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆ ಮೂಲಕ ನೀಡಿದ ಭರವಸೆಯಿಂದ  ಹಿಂದೆ ಸರಿದರೆ , ಮುಂದಿನ ಚುನಾವಣೆಯಲ್ಲಿ ತಮ್ಮ ಸಾರ್ವಭೌಮತ್ವವನ್ನು  ಬದಲಾಯಿಸಲು  ತಮ್ಮ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. 
ಆದ್ದರಿಂದ, ತಾವು ಪ್ರಣಾಳಿಕೆಯಲ್ಲಿ ನೀಡಿರುವ ಭರವಷೆಯಂತೆ ಸಂವಿಧಾನ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ, ಸಂವಿಧಾನ ಮತ್ತು ಮಾನವ ಹಕ್ಕುಗಳ ನೆಲೆಯಲ್ಲಿ , ಎಲ್ಲರಿಗೂ ಹಕ್ಕು ಆಧಾರಿತ ಸಂವಿಧಾನ ಬದ್ಧ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಉನ್ನತ ಮಟ್ಟದ ತಜ್ಞರ ಶಿಕ್ಷಣ ಆಯೋಗವನ್ನು ರಚಿಸಬೇಕೆಂದು ತಮ್ಮಲ್ಲಿ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ. 

ನಿರಂಜನಾರಾಧ್ಯ ವಿ.ಪಿ

ಪ್ರಧಾನ ಸಂಚಾಲಕರು, ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ

share
Next Story
X