ಶಕ್ತಿ ಯೋಜನೆಗೆ ಚಾಲನೆ: ಬಸ್ ಚಲಾಯಿಸಿ ಗಮನ ಸೆಳೆದ ಶಾಸಕಿ ರೂಪಕಲಾ

ಕೋಲಾರ: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ ಯೋಜನೆ’ಗೆ ಚಾಲನೆ ನೀಡುವ ವೇಳೆ ಬಸ್ ಚಲಾಯಿಸಿ ಕೆಜಿಎಫ್ ಶಾಸಕಿ ರೂಪಕಲಾ ಎಲ್ಲರ ಗಮನ ಸೆಳೆದಿದ್ದಾರೆ.
ಶಕ್ತಿ ಯೋಜನೆಗೆ ಶಾಸಕಿ ರೂಪಕಲಾ ಚಾಲನೆ ನೀಡಿದ ಬಳಿಕ ಬಸ್ ಚಲಾಯಿಸುವಂತೆ ಅಲ್ಲಿದ್ದ ಕಾರ್ಯಕರ್ತರು ಕೇಳಿಕೊಂಡಿದ್ದಾರೆ. ಎಲ್ಲರ ಒತ್ತಾಯಕ್ಕೆ ಮಣಿದ ಶಾಸಕಿ ಬಸ್ ಚಲಾಯಿಸಲು ಮುಂದಾಗಿದ್ದು, ಅವರಿಗೆ ಬಸ್ ಚಾಲಕ ಅಗತ್ಯ ಮಾರ್ಗರ್ಶನ ನೀಡಿದ್ದಾರೆ. ಶಾಸಕಿ ರೂಪಕಲಾ ಬಸ್ನಲ್ಲಿ ಕುಳಿತು ಸ್ವಲ್ಪ ದೂರ ಪ್ರಯಾಣಿಸಿದರು.
Next Story





