ಟೆಂಪೋ- ಓಮ್ನಿ ಢಿಕ್ಕಿ: ಆರು ಮಂದಿಗೆ ಗಾಯ

ಬ್ರಹ್ಮಾವರ, ಜೂ.11: ಟೆಂಪೊವೊಂದು ಓಮ್ನಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗಾಯಗೊಂಡವರನ್ನು ಕಾರು ಚಾಲಕ ಕಿರಿಮಂಜೇಶ್ವರದ ಅಕಳಬೈಲು ನಿವಾಸಿ ಜಹೀರ್ ಎಂಬವರ ಪತ್ನಿ ಆಸ್ಮಾ (25), ಸಂಬಂಧಿಕರಾದ ಇಬ್ರಾಹಿಂ, ಮೂಹಾಜ್(13), ಪಾತಿಮಾ(58), ಇಫ್ರತ್(8), ಶಯಾನ್(5) ಎಂದು ಗುರುತಿಸಲಾಗಿದೆ.
ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಟೆಂಪೊ, ಓಮಿನಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಟೆಂಪೋ ಸ್ವಲ್ಪಮುಂದೆ ಚಲಿಸಿ ಮಗುಚಿ ಬಿತ್ತೆನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story