ರಸ್ತೆ ಅಪಘಾತ; ಗಾಯಾಳು ಯುವಕ ಮೃತ್ಯು

ಉಪ್ಪಿನಂಗಡಿ : ವಾರದ ಹಿಂದೆ ಇಲ್ಲಿನ ಪಂಜಳ ಎಂಬಲ್ಲಿ ಬೈಕ್ ಮತ್ತು ಲಾರಿ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಮ್ಮದ್ ಅನೀಸ್ (27) ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತ ಮಹಮ್ಮದ್ ಅನೀಸ್ ಬಜತ್ತೂರು ಗ್ರಾಮದ ಬೆದ್ರೋಡಿ ವಿದ್ಯಾನಗರ ನಿವಾಸಿ ಇಬ್ರಾಹಿಂ ಎಂಬವರ ಮಗನಾಗಿದ್ದು, ಕಳೆದ ಜೂನ್ 2 ರಂದು ನೀರಕಟ್ಟೆಯಿಂದ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಪಂಜಳ ಎಂಬಲ್ಲಿ ಲಾರಿ ಢಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಮ್ಮದ್ ಅನೀಸ್ ಮತ್ತು ಸಹ ಸವಾರ ಹಮೀದ್ ಎಂಬಿಬ್ಬರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತ ಸಂಭವಿಸಿದಾಕ್ಷಣದಿಂದ ಕೋಮಾಸ್ಥಿತಿಯಲ್ಲಿದ್ದ ಮಹಮ್ಮದ್ ಅನೀಸ್ ಚಿಕಿತ್ಸೆಗೆ ಸ್ಪಂದಿಸದೆ ಕಳೆದ ರಾತ್ರಿ ಮೃತಪಟ್ಟರು. ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story