ಇರಾನ್ ಪರಮಾಣು ಶಸ್ತ್ರಾಸ್ತ್ರ ಉತ್ಪಾದಿಸಲು ಬಯಸಿಲ್ಲ: ಆಯತುಲ್ಲಾ ಅಲಿ ಖಾಮಿನೈ
ಟೆಹ್ರಾನ್, ಜೂ.11: ದೇಶದ ಪರಮಾಣು ಯೋಜನೆಯ ಬಗ್ಗೆ ಪಾಶ್ಚಿಮಾತ್ಯರೊಂದಿಗೆ ಒಪ್ಪಂದದಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಪರಮಾಣು ಉದ್ಯಮದ ಮೂಲಸೌಕರ್ಯವನ್ನು ಮುಟ್ಟಬಾರದು ಎಂದು ಇರಾನ್‌ನ ಪರಮೋಚ್ಛ ಮುಖಂಡ ಆಯತುಲ್ಲಾ ಆಲಿ ಖಾಮಿನೈ ಹೇಳಿದ್ದಾರೆ.
ನಮ್ಮ ಪರಮಾಣು ಮೂಲಸೌಕರ್ಯಗಳು ಹಾಗೆಯೇ ಉಳಿದಿದ್ದರೆ ಮಾತ್ರ ಪಾಶ್ಚಿಮಾತ್ಯರೊಂದಿಗೆ ಪರಮಾಣು ಮಹತ್ವಾಕಾಂಕ್ಷೆಯ ಕುರಿತ ಒಪ್ಪಂದ ಸಾಧ್ಯ. ಸುರಕ್ಷತೆಯ ಚೌಕಟ್ಟಿನಲ್ಲಿ ಅಂತರಾಷ್ಟ್ರೀಯ ಪರಮಾಣು ನಿಗಾಸಮಿತಿಯ ಜತೆ ಕಾರ್ಯನಿರ್ವಹಿಸುವುದನ್ನು ಇರಾನ್ ಮುಂದುವರಿಸಬಹುದು ಎಂದು ಖಾಮಿನೈ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಯಾವತ್ತೂ ಪರಮಾಣು ಬಾಂಬ್ ತಯಾರಿಸಲು ಬಯಸಿಲ್ಲ. ಈ ಕುರಿತ ಹೇಳಿಕೆಗಳೆಲ್ಲಾ ಅಪ್ಪಟ ಸುಳ್ಳು. ಯಾಕೆಂದರೆ ನಮ್ಮ ಧಾರ್ಮಿಕ ನಂಬಿಕೆಗಳಿಂದಾಗಿ ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸುವುದಿಲ್ಲ. ಇಲ್ಲದಿದ್ದರೆ, ಅವರು(ಪಾಶ್ಚಿಮಾತ್ಯರು) ಖಂಡಿತಾ ನಮ್ಮನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದವರು ಹೇಳಿದ್ದಾರೆ.
ಇರಾನ್‌ನ 2015ರ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆ ಸೆಪ್ಟಂಬರ್‌ನಿಂದ ಸ್ಥಗಿತಗೊಂಡಿದೆ.