ಚಾಮರಾಜನಗರ | ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತನ ಮೃತದೇಹ ಪತ್ತೆ
5 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ

5 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ
ಚಾಮರಾಜನಗರ: ಮದುವೆಯಾದ ಐದೇ ದಿನದಲ್ಲಿ ವರನೊಬ್ಬನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ರವಿವಾರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ವರದಿಯಾಗಿದೆ.
ಮೃತ ನವ ವಿವಾಹಿತನನ್ನು ನಗರದ ಜಿ.ಪಿ.ಮಲ್ಲಪ್ಪಪುರಂ ನಿವಾಸಿ ಸತೀಶ್ ಬಾಬು (43) ಎಂದು ಗುರುತಿಸಲಾಗಿದೆ. 5 ದಿನಗಳ ಹಿಂದೆಯಷ್ಟೇ ನರಸೀಪುರದ ಕನ್ನಹಳ್ಳಿ ಗ್ರಾಮದ ಚೆನ್ನಾಜಮ್ಮನ ಜೊತೆ ಸತೀಶ್ ಬಾಬು ವಿವಾಹವಾಗಿದ್ದರು.
ಈ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿರುವ ಅವರ ಪತ್ನಿ, ಸತೀಶ್ ತಂದೆ, ತಾಯಿ ಮತ್ತು ಸಂಬಂಧಿಕರ ವಿರುದ್ಧ ನಗರ ಠಾಣೆಗೆ ದೂರು ನೀಡಿದ್ದಾರೆ.
ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
Next Story





