ಜೆಪ್ಪುಸಂತ ಅಂತೋನಿ ಆಶ್ರಮಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ

ಮಂಗಳೂರು, ಜೂ. 12: ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ. ಖಾದರ್ ಸೋಮವಾರ ಮಂಗಳೂರಿನ ಜೆಪ್ಪುವಿನ ಸೈಂಟ್ ಅಂತೋನಿ ಆಶ್ರಮಕ್ಕೆ ಭೇಟಿ ನೀಡಿದರು.
ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಅಲ್ವಿನ್ ಡಿ ಸೋಜ ಅವರು ಖಾದರ್‌ನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಖಾದರ್ ಅವರು ಸ್ಪೀಕರ್ ಆಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶಿಷ್ಟ ‘ಗ್ಯಾರಂಟಿ’ ಮೂಲಕ ರಾಜ್ಯದ ಹಿತ ಕಾಪಾಡುತ್ತಿ ದ್ದಾರೆ. ನೂರಾರು ವರ್ಷಗಳಿಂದ ಬಡಜನರಿಗೆ ಉಚಿತ ವಸತಿ, ಬಟ್ಟೆ, ಆಹಾರ ನೀಡುವ ಸಂತ ಅಂತೋನಿ ಚ್ಯಾರಿಟಿ ಸಂಸ್ಥೆ ಅತ್ಯಂತ ಉತ್ತಮ ಪುಣ್ಯಕ್ಷೇತ್ರವಾಗಿದೆ ಎಂದು ಶ್ಲಾಘಿಸಿದರು.
ಸಂತ ಆಂತೊನಿ ವಾರ್ಷಿಕ ಮಹೋತ್ಸವಕ್ಕೆ ಖಾದರ್ ಶುಭ ಹಾರೈಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ಮಾತನಾಡಿ, ವಿಧಾನ ಸಭೆಯ ಸ್ಪೀಕರ್ ಖಾದರ್ ಅವರು ಜನಸ್ನೇಹಿ ವ್ಯಕ್ತಿ. ಶಾಸಕರಾಗಿ, ಸಚಿವರಾಗಿ ಯಶಸ್ವಿಯಾಗಿರುವ ಖಾದರ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದರು.
ಅಭಿನಂದನಾ ಭಾಷಣ ಮಾಡಿದ ವಕೀಲ ಎಂ ಪಿ ನೊರೊನ್ಹಾ ಅವರು ಯು.ಟಿ.ಖಾದರ್ ಜನಪ್ರೀಯ ನಾಯಕ ಮಾತ್ರವಲ್ಲ ಅವರುದ್ವನಿ ಇಲ್ಲದವರ ಧ್ವನಿಯಾಗಿದ್ದಾರೆ. ಭಾರತದ ಸಂವಿಧಾನದ ಆಶಯ ಮತ್ತು ತತ್ವಗಳಿಗೆ ಗೌರವಕೊಡುವ ಸರಳ ಸಜ್ಜನಿಕೆಯ ಸುಜ್ಞಾನಿ ಎಂದು ಅಭಿಪ್ರಾಯಪಟ್ಟರು.
ಆಶ್ರಮದ ಟ್ರಸ್ಟಿಗಳಾದ ಡಾ. ಜಾನ್ ಡಿ ಸಿಲ್ವಾ ಮತ್ತು ಮಾರ್ಸೆಲ್ ಮೊಂತೆರೊ, ಮನಪಾ ವಿಪಕ್ಷ ನಾಯಕ ನವೀನ್ ಡಿ ಸೋಜ, ಮಾಜಿ ಮೇಯರ್ ಜೆಸಿಂತಾ ಅಲ್ಫ್ರೇಡ್, ಮಾಜಿ ಉಪ ಮೇಯರ್ ಲ್ಯಾನ್ಸ್‌ಲೋಟ್ ಪಿಂಟೊ, ಫಾದರ್ ಮುಲ್ಲರ್ ಚಾರಿಟಬಲ್ ಆಡಳಿತಾಧಿಕಾರಿ ಅಜಿತ್ ಮೆನೆಜಸ್, ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ಟಲಿನೊ, ಕೆನರಾ ಕಮ್ಯುನಿಕೇಶನ್ ಸೆಂಟರ್‌ನ ನಿರ್ದೇಶಕ ಫಾ.ಅನಿಲ್ ಫೆರ್ನಾಂಡಿಸ್, ನಿರ್ದೇಶಕ , ಮತ್ತು ಫಾ. ನೆಲ್ಸನ್ ಪೆರಿಸ್, ಬೆಥನಿ ಸಭೆಯ ಪ್ರಾಂತೀಯ ಸುಪೀರಿಯರ್ ಭ. ಸಿಸಿಲಿಯಾ ಮೆಂಡೋನ್ಸಾ, ರೋಶೆಲ್ ಬಿ ಎಸ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಫಾ. ಜೆ.ಬಿ. ಕ್ರಾಸ್ತಾ ಸ್ವಾಗತಿಸಿ, ಆಡಳಿತ ಮಂಡಳಿಯ ಸದಸ್ಯ ಜಾನ್ ಡಿ ಸಿಲ್ವ ವಂದಿಸಿ ದರು. ಆಶ್ರಮದ ಸಹಾಯಕ ನಿರ್ದೇಶಕ ಫಾ. ಅವಿನಾಶ್ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು.